ಪ್ರವಾಸಿ ಟ್ಯಾಕ್ಸಿ ಯೋಜನೆ : ಅರ್ಜಿ ಆಹ್ವಾನ
ದಾವಣಗೆರೆ : ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆ ವತಿಯಿಂದ 2013-14ನೇ ಸಾಲಿನಿಂದ 2016-17ನೇ ಸಾಲಿನವರೆಗೆ ಬಾಕಿ ಉಳಿದಿರುವ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಯೋಜನೆಯಡಿ ಪರಿಶಿಷ್ಟ ಜಾತಿಯ 07 ಹಾಗೂ ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದ 08 ಅಭ್ಯರ್ಥಿಗಳಿಗೆ ತಲಾ ರೂ.2.00 ಲಕ್ಷಗಳ ಸಹಾಯಧನದೊಂದಿಗೆ ಪ್ರವಾಸಿ ಟ್ಯಾಕ್ಸಿ ವಿತರಿಸಲು ಅರ್ಹ ನಿರುದ್ಯೋಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿದ್ದು, ಲಘುವಾಹನ ಪರವಾನಿಗೆ (ಡಿ.ಎಲ್) ಮತ್ತು ಬ್ಯಾಡ್ಜ್ ಹೊಂದಿರಬೇಕು. ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು.
ಅರ್ಜಿಯನ್ನು ಏ. 01 ರಿಂದ ಕಛೇರಿ ವೇಳೆಯಲ್ಲಿ ವಿತರಿಸಲಾಗುವುದು. ಭರ್ತಿ ಮಾಡಿದ ಅರ್ಜಿ ಸ್ವೀಕರಿಸಲು ಏ. 30 ಕೊನೆಯ ದಿನವಾಗಿರುತ್ತದೆ. ಆಸಕ್ತ ಅಭ್ಯರ್ಥಿಗಳು ಬ್ಯಾಡ್ಜ್ ಹೊಂದಿರುವ ಲಘುವಾಹನ ಪರವಾನಿಗೆ (ಡಿ.ಎಲ್) ಮತ್ತು ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ಪ್ರಮಾಣ ಪತ್ರದ ನಕಲು (ಜೆರಾಕ್ಸ್) ಪ್ರತಿಗಳನ್ನು ಸಲ್ಲಿಸಿ ಅರ್ಜಿ ಉಚಿತವಾಗಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಸ್ವಯಂ ದೃಢೀಕರಿಸಿ, ದ್ವಿ-ಪ್ರತಿಯಲ್ಲಿ ಖುದ್ದಾಗಿ ಸಲ್ಲಿಸಿ, ಸಲ್ಲಿಸಿರುವ ದಾಖಲೆಗಳಿಗೆ ತಪ್ಪದೇ ಸ್ವೀಕೃತಿ (ಚೆಕ್ ಲಿಸ್ಟ್) ಪಡೆದುಕೊಳ್ಳಬೇಕು. ಅಂಚೆ ಮೂಲಕ ಸಲ್ಲಿಸಿದ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಛೇರಿ, ಪ್ರವಾದಸೋದ್ಯಮ ಇಲಾಖೆ, ಉಪವಿಭಾಗಾಧಿಕಾರಿಗಳ ಕಛೇರಿ ಆವರಣ ರೈಲ್ವೆ ನಿಲ್ದಾಣ ಪಕ್ಕ ಹರಿಹರ ರಸ್ತೆ ದಾವಣಗೆರೆ (ದೂರವಾಣಿ-08192-230123) ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.