20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸಂಚಾರಿ ಇನ್ಸ್‌ಪೆಕ್ಟರ್ ಎಸಿಬಿ ಬಲೆಗೆ.!

Trpick Inspecter

ಬೆಂಗಳೂರು: 20 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಸಂಚಾರಿ ಇನ್ಸ್‌ಪೆಕ್ಟರ್‌ ಒಬ್ಬರು ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಹಂಸವೇಣಿ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳ ACB ಬಲೆಗೆ ಬಿದ್ದ ಸಂಚಾರಿ ಇನ್ಸ್‌ಪೆಕ್ಟರ್. ಗ್ಯಾಸ್ ಪೈಪ್‌ಲೈನ್ GAS PIPELINE ಅಳವಡಿಸಲು ರಸ್ತೆಬದಿ ಅಗೆಯಲು ಯೋಜನೆ ಹಾಕಿಕೊಳ್ಳಲಾಗಿತ್ತು. ರಸ್ತೆಬದಿ ಅಗೆಯಲು ಗೇಲ್ GAIL ಕಂಪನಿ ಅಧಿಕಾರಿಗಳು ಮುಂದಾಗಿದ್ದರು. ಇದಕ್ಕೆ ಸಂಚಾರಿ ಪೊಲೀಸರ ಅನುಮತಿ ಕೇಳಿದ್ದರು. TRAFFIC INSPECTOR ಸಂಚಾರಿ ಇನ್ಸ್‌ಪೆಕ್ಟರ್ ಹಂಸವೇಣಿ ಅನುಮತಿ ನೀಡಲು 20 ಸಾವಿರ ಲಂಚಕ್ಕೆ BRIBE ಬೇಡಿಕೆಯಿಟ್ಟಿದ್ದರು.

ಲಂಚಕ್ಕೆ ಬೇಡಿಕೆ ನೀಡಿರುವ ಬಗ್ಗೆ GAIL ಕಂಪನಿ ಅಧಿಕಾರಿಗಳು ಎಸಿಬಿಗೆ ದೂರು ನೀಡಿದ್ದರು. ಇಂದು ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಈ ಸಂಬಂಧ ಬೆಂಗಳೂರು ನಗರ ಎಸಿಬಿ BANGALORE TOWN ACB ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುದ್ದಿಗಾಗಿ ಸಂಪರ್ಕಿಸಿ: 9740365719
garudavoice21@gmail.com

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!