PSI TRANSFER: ಪೂರ್ವ ವಲಯ ವ್ಯಾಪ್ತಿಯ 27 PSI ಅಧಿಕಾರಿಗಳ ವರ್ಗಾವಣೆ

ದಾವಣಗೆರೆ:(PSI TRANSFER) ಪೂರ್ವ ವಲಯ ವ್ಯಾಪ್ತಿಯ 27 ಪಿಎಸ್ಐ [ಸಿವಿಲ್) ರವರುಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ಕೋರಿಕೆ ಮೇರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ವರ್ಗಾವಣೆ ಮಾಡಿ ಆದೇಶಿಸಿದೆ.
ಪೊಲೀಸ್ ಅಧೀಕ್ಷಕರು, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಮತ್ತು ಹಾವೇರಿ ಜಿಲ್ಲೆರವರು ಮೇಲ್ಕಂಡ ಪಿಎಸ್ಐ ರವರನ್ನು ಯಾವುದೇ ಸೇರುವಿಕೆಯ ಕಾಲವನ್ನು ಉಪಯೋಗಿಸಿಕೊಳ್ಳದೇ ವರ್ಗಾಯಿಸಲಾದ ಸ್ಥಳದಲ್ಲಿ ಮತ್ತು ಸ್ಥಳ ನಿಯುಕ್ತಿಗೊಳ್ಳದ ಪಿಎಸ್ಐ ರವರನ್ನು ವಲಯ ಕಛೇರಿಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವ ಸೂಚನೆಯೊಂದಿಗೆ ಕೂಡಲೇ ಬಿಡುಗಡೆಗೊಳಿಸಿ, ವರದಿ ಮತ್ತು ಬಿಡುಗಡೆಯ ಕುರಿತು ಈ ಕಛೇರಿಗೆ ತಪ್ಪದೇ ಪಾಲನಾ ವರದಿಯನ್ನು ಸಲ್ಲಿಸುವುದು ಎಂದು ಪೂರ್ವ ವಲಯ ಮಹಾ ನಿರೀಕ್ಷಕರಾದ
ಡಾ|| ಬಿ.ಆರ್.ರವಿಕಾಂತೇಗೌಡ ಐ ಪಿ ಎಸ್ ಆದೇಶಿಸಿದ್ದಾರೆ.