ತುಮಕೂರು : ಆಟ ಆಡುವಾಗ ಹಾವು ಕಚ್ಚಿ ಬಾಲಕ ಸಾವು

WhatsApp Image 2022-02-23 at 12.28.19 PM

ತುಮಕೂರು: ಆಟವಾಡುತ್ತಿದ್ದ ವೇಳೆ ಹತ್ತು ವರ್ಷದ ಬಾಲಕನಿಗೆ ಹಾವು ಕಚ್ಚಿದ ಪರಿಣಾಮ ಸಾವನ್ನಪ್ಪಿರುವ ಘಟನೆ ತಿಪಟೂರು ತಾಲೂಕಿನ ಕೋಟಿನಾಯಕಹಳ್ಳಿ ಗ್ರಾಮದಲ್ಲಿ ನಡೆದಿದೆ.

[ ಹಾವು ಕಚ್ಚಿದ ತಕ್ಷಣವೇ ಬಾಲಕನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೇ ಬಾಲಕ ಅಸುನೀಗಿದ್ದಾನೆ. ಈ ಕುರಿತು ತಿಪಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ]

ವೇಣುಗೋಪಾಲ್ (10) ಎಂಬಾತ ಮೃತಪಟ್ಟ ಬಾಲಕ. ಮನೆ ಅಂಗಳದಲ್ಲಿ ಆಟ ಆಡುವಾಗ ಈ ದುರ್ಘಟನೆ ನಡೆದಿದೆ. ವಿಷಪೂರಿತ ಸರ್ಪವೊಂದು ಕಚ್ಚಿದ ಕೂಡಲೇ ಬಾಲಕ ತನ್ನ ಪೋಷಕರ ಹತ್ತಿರ ತಿಳಿಸಿದ್ದಾನೆ.
ಕೂಡಲೇ ಪೋಷಕರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ವೇಣುಗೋಪಾಲ್ ಮೃತಪಟ್ಟಿದ್ದಾನೆ.

ಈ ಕುರಿತು ತಿಪಟೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!