ದಾವಣಗೆರೆಯ ದೇವರಾಜ್ ಅರಸ್ ಈಜುಕೊಳದಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು

ದಾವಣಗೆರೆ: ಕಳೆದ ಮಾರ್ಚ್ ತಿಂಗಳಿನಲ್ಲಷ್ಟೇ ನವೀಕರಣಗೊಂಡು ಲೋಕಾರ್ಪಣೆಗೊಂಡಿದ್ದ ದಾವಣಗೆರೆ ದೇವರಾಜ ಅರಸು ಬಡಾವಣೆಯಲ್ಲಿನ ಈಜುಕೊಳದಲ್ಲಿ ಇಬ್ಬರು ಹುಡುಗರು ಮುಳುಗಿ ಸಾವನ್ನಪ್ಪಿದ್ದಾರೆ.

ಶುಕ್ರವಾರ ಸಂಜೆ 4 ಗಂಟೆ ಸಮಾರಿಗೆ ಈಜಾಡಲು ತೆರಳಿದ್ದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈಜು ಬಾರದಿದ್ದರೂ ಅವರು ಮೇಲಿನಿಂದ ನೀರಿಗೆ ಹಾರಿದ್ದರಿಂದ ಈ ದುರ್ಘಟನೆ ಸಂಭವಿಸಿದೆ. ಈ ವೇಳೆ ಈಜುಕೊಳದಲ್ಲಿ ಯಾವುದೇ ಮಾರ್ಗದರ್ಶಕರು ಇರಲಿಲ್ಲ ಎಂಬುದಾಗಿ ಹೇಳಲಾಗಿದೆ.

ಸದ್ಯ ಮೃತ ದೇಹಗಳನ್ನು ಜಿಲ್ಲಾ ಜಿಗಟೇರಿ ಆಸ್ಪತ್ರೆಗೆ ಮಹಜರಿಗಾಗಿ ತರಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬೇಸಿಗೆ ಬೇಗೆಯಿಂದ ಕಂಗೆಟ್ಟಿದ್ದ ದಾವಣಗೆರೆಗೆ ಈ ಈಜುಕೊಳ ವರದಾನವಾಗಿತ್ತು. ಆದರೆ ಹಲವಾರು ತಿಂಗಳಿನಿಂದ ಸ್ಥಗಿತವಾಗಿತ್ತು. ನವೀಕರಿಸಿ ಕಳೆದ ಮಾರ್ಚ್‌ ತಿಂಗಳಿನಲ್ಲಷ್ಟೇ ಸಂಸದ ಜಿ.ಎಂ. ಸಿದ್ದೇಶ್ವರ ಸ್ಮಾರ್ಟ್ ಸಿಟಿ ಹಾಗೂ ಮಹಾನಗರಪಾಲಿಕೆ ಅಧಿಕಾರಿಗಳು ಅವರು ಲೋಕಾರ್ಪಣೆಗೊಳಿಸಿದ್ದರು.

Leave a Reply

Your email address will not be published. Required fields are marked *

error: Content is protected !!