ಕೃಷಿ ಹೊಂಡದಲ್ಲಿ ಈಜಾಡಲು ಹೋಗಿ ಚನ್ನಗಿರಿಯ ಬಾಲಕರಿಬ್ಬರ ಸಾವು

ದಾವಣಗೆರೆ: ಸೋಮವಾರ ಮೇ 8 ರಂದು ಹತ್ತನೇ ತರಗತಿ ಉತ್ತೀರ್ಣನಾಗಿದ್ದ ಓರ್ವ ಬಾಲಕ ಹಾಗೂ ಪ್ರಸ್ತುತ ಹತ್ತನೇ ತರಗತಿಗೆ ಸೇರಿದ್ದ ಓರ್ವ ಬಾಲಕ ಈಜಾಡಲು ಹೋಗಿ ದಾರುಣ ಸಾವನ್ನಪ್ಪಿರುವ ಘಟನೆ ನಡೆದಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಮುದಿಗೆರೆ ಬಳಿಯ ಕೃಷಿ ಹೊಂಡದಲ್ಲಿ ಇಂದು ಈಜಾಡಲು ತೆರಳಿದ್ದ ಹೇಮಂತ್ ಹಾಗೂ ಗಣೇಶ್ ಎಂಬ ಇಬ್ಬರು ಬಾಲಕರು ಸಾವನ್ನಪ್ಪಿದ್ದಾರೆ. ನೀರಿಗೆ ಬಿದ್ದು ಕೆಲ ಹೊತ್ತಿನಲ್ಲಿ ಇಬ್ಬರೂ ಈಜಾಡಲು ಸಾಧ್ಯವಾಗದೆ ಸಾವು ಸಂಭವಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಆಸ್ಪತ್ರೆಗೆ ಕರೆದುಕೊಂಡು ಹೋದರು ಯಾವುದೇ ಪ್ರಯೋಜನವಾಗಿಲ್ಲ, ಬಾಲಕರ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
https://www.facebook.com/watch/?v=1347723865791834&mibextid=Nif5oz
ಇನ್ನಾದರೂ ಕೃಷಿ ಹೊಂಡದಲ್ಲಿ ಯಾರೂ ಕೂಡ ಈಜಾಡಲೂ ಹೋಗದೆ ಸೂಕ್ತ ಭದ್ರತೆ ಹಾಗೂ ಎಚ್ಚರಿಕೆಯಿಂದ ಇರಬೇಕೆಂದು ಗ್ರಾಮಸ್ಥರು ಮಾತ ನಾಡಿಕೊಳ್ಳುತ್ತಿದ್ದರು.