ಉಚ್ಚೆಂಗೆಮ್ಮದೇವಿ ಹುಂಡಿಯಲ್ಲಿ 27 ಲಕ್ಷ ರೂಪಾಯಿ ಸಂಗ್ರಹ : ಕೊವಿಡ್ ನಿಂದ ದೇವಸ್ಥಾನ ಬಂದ್ ಇದ್ದರೂ ನಿರೀಕ್ಷೆಗೂ ಮೀರಿ ಕಾಣಿಕೆ ಸಂಗ್ರಹ

ಉಚ್ಚಂಗಿದುರ್ಗ: ಇಲ್ಲಿನ ಐತಿಹಾಸಿಕ ಧಾರ್ಮಿಕ ಕ್ಷೇತ್ರ ಉಚ್ಚೆಂಗೆಮ್ಮದೇವಿ ದೇವಸ್ಥಾನದಲ್ಲಿ ಸೋಮವಾರ ಕಾಣಿಕೆ ಹುಂಡಿ ಎಣಿಕೆ ಮಾಡಲಾಗಿದ್ದು, ಬರೋಬ್ಬರಿ 27,42,622 ಸಂಗ್ರಹವಾಗಿದೆ ಎಂದು ಶ್ರೀ ಉತ್ಸವಾoಭ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೇಶಾದ್ಯಂತ ಕೊರೊನ ಸೋಂಕಿನ 2 ನೇ ಅಲೆಯ ಹೆಚ್ಚಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಿಂದ ಏಪ್ರಿಲ್,ಮೇ,ಜೂನ್ ತಿಂಗಳಿನಲ್ಲಿ ಹಾಗೂ ಶ್ರಾವಣ ಮಾಸದ ಶುಕ್ರವಾರ, ಮಂಗಳವಾರ,ಹುಣ್ಣಿಮೆ ಅಮಾವಾಸ್ಯೆ ದಿನಗಳಲ್ಲಿ ಸರ್ಕಾರದ ಆದೇಶದಂತೆ ದೇವಸ್ಥಾನ ಬಂದ್ ಮಾಡಲಾಗಿದ್ದರು ಹುಂಡಿಯಲ್ಲಿ ನಿರೀಕ್ಷೆಗೂ ಮೀರಿ ಕಾಣಿಕೆ ಸಂಗ್ರಹವಾಗಿದೆ.
ಹುಂಡಿ ಎಣಿಕೆ ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲ 7 ಘಂಟೆವರೆಗೂನಡೆಯಿತು ಈ ಹಿಂದೆ ಏಪ್ರಿಲ್ ತಿಂಗಳಿನಲ್ಲಿ ಹುಂಡಿ ಎಣಿಕೆ ನಡೆದಿತ್ತು.ಉಚ್ಚೆಂಗೆಮ್ಮ ದೇವಸ್ಥಾನದ ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ಹರಪನಹಳ್ಳಿ ಕೆನರಾ ಬ್ಯಾಂಕ್ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ಮೈಲಾರಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ್ ಕೆನರಾ ಬ್ಯಾಂಕ್ ಮ್ಯಾನೇಜರ್ ಅನಿಲ್ ಕುಮಾರ್,ಅರ್ಚಕರಾದ ಹಾಲೇಶ್ ಗುಮಾಸ್ತರಾದ ರಮೇಶ್,ಸೇವಾದಳದ ಸಿಬ್ಬಂದಿ ,ದೇವಸ್ಥಾನದ ಸಿಬ್ಬಂದಿ, ಪೊಲೀಸ್ ಇಲಾಖೆ,ಪ್ರವಾಸಿ ಪೊಲೀಸರು, ಗೃಹ ರಕ್ಷಕ ಸಿಬ್ಬಂದಿ, ಅರ್ಚಕರು,ಉಪಸ್ಥಿತರಿದ್ದರು..