ಗ್ರಾಮಸ್ಥರಿಂದ ಪಟ್ಟಾಧಿಕಾರ ಸ್ವೀಕರಿಸಿದ ಗ್ರಾಮದ ಬಾಲಕ: 60 ವರ್ಷದ ನಂತರ ಉಚ್ಚಂಗಿದುರ್ಗದಲ್ಲಿ ನಡೆದ ಕಾರ್ಯಕ್ರಮ

IMG-20211116-WA0131

ಹರಪನಹಳ್ಳಿ ( ಉಚ್ಚಂಗಿದುರ್ಗ): ಹರಪನಹಳ್ಳಿ ತಾಲ್ಲೂಕಿನ ಐತಿಹಾಸಿಕ ಮತ್ತು ಧಾರ್ಮಿಕ ಪ್ರಸಿದ್ಧ ಉಚ್ಚಂಗಿದುರ್ಗದಲ್ಲಿ ಶಕ್ತಿದೇವತೆ ಉಚ್ಚೆಂಗೆಮ್ಮನೆಲೆಸಿದ್ದು ಶ್ರೀ ಕ್ಷೇತ್ರದಲ್ಲಿ ವರ್ಷದಲ್ಲಿ ದೇವಿಯ ಉತ್ಸವ ಮೂರ್ತಿಯು ಪ್ರತಿ ಹುಣ್ಣಿಮೆಗೆ ಆನೆಹೊಂಡಕ್ಕೆ ಗಂಗೆಪೂಜೆಗೆ ಹೋಗುವುದು,ಯುಗಾದಿ ಹಬ್ಬದಲ್ಲಿ ಗ್ರಾಮದ ಓಕಳಿ ಉತ್ಸವ,ದಸರಾದಲ್ಲಿ ಬನ್ನಿ ಉತ್ಸವ,ಹಿರೇ ಮೆಗಳಗೆರೆ,ಕಂಚಿಕೆರೆ ಯಾವುದೇ ಧಾರ್ಮಿಕ ಕಾರ್ಯಕ್ರಮದಲ್ಲಿ ಉಚ್ಚoಗೆಮ್ಮನ ದೇವರ ಉತ್ಸವ ಮೂರ್ತಿಯ ಮುಂದೆ ಗ್ರಾಮಸ್ಥರ ಸಮ್ಮುಖದಲ್ಲಿ ಪಟ್ಟಕಟ್ಟಿದ ಗ್ರಾಮದ ವೈಯಾಳಿ ಮನೆತನದವರೂ ದೇವಿಯ ರುಂಡ ಮಾಲೆಯನ್ನು ದರಿಸಿಹೋಗುವುದು ಇತಿಹಾಸ ಕಾಲದಿಂದ ನಡೆದುಕೊಂಡು ಬಂದಿದೆ.

1963 ರಲ್ಲಿ ಗ್ರಾಮದ ವೈಯಾಳಿ ದುರುಕೆಂಚ್ಚಪ್ಪ ಎನ್ನುವ ವ್ಯಕ್ತಿಯನ್ನು ಪಟ್ಟಕಟ್ಟಿದ್ದರೂ ದುರುಕೇಂಚ್ಚಪ್ಪ ವಯೋಸಹಜ ಮರಣವನ್ನು ಹೊಂದಿದ್ದರೂ.

ನ.16 ರಂದು ವೈಯ್ಯಾಳಿ ಮನೆತನದ ಹನುಮಂತಪ್ಪನನ್ನು ಆನೆ ಹೊಂಡದಲ್ಲಿ ಸ್ನಾನ ಮಾಡಿಸಿ ಅದ್ದೂರಿಯಾಗಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆದುಕೊಂಡು ಬರಲಾಗಿತು ದೇವಸ್ಥಾನ ಸುತ್ತ ಮುತ್ತ ಬಾಳೆಕಂಭ ಹಾಗೂ ಮಾವಿನ ಸೊಪ್ಪಿನ ಅಲಂಕಾರ ಮಾಡಲಾಗಿತ್ತು.

ಉಚ್ಚಂಗಿದುರ್ಗದ ಸರ್ವ ಗ್ರಾಮಸ್ಥರ ಸಮ್ಮುಖದಲ್ಲಿ ಉಚ್ಚoಗೇಮ್ಮನ ದೇವಸ್ಥಾನದಲ್ಲಿ ಗ್ರಾಮಸ್ಥರಿಂದ ದೇವಿಯ ರುಂಡಮಾಲೆಯನ್ನು ಗ್ರಾಮದ ವೈಯಾಳಿ ಮನೆತನದ 06 ಕುಟುಂಬದಲ್ಲಿ ದೇವಿಯ ಅನುಗ್ರಹ ದೊರೆತ ಹನುಮಂತಪ್ಪ ಎನ್ನುವ ಬಾಲಕನಿಗೆ ಪಟ್ಟಾಧಿಕಾರ ಮಾಡಿದರೂ.

ಪಟ್ಟಾಧಿಕಾರ ಪಡೆದ ಬಾಲಕ

ಈ ಸಂದರ್ಭದಲ್ಲಿ ಗ್ರಾಮಸ್ಥರೂ, ಗ್ರಾಮ ಪಂಚಾಯಿತಿ ಸರ್ವ ಸದಸ್ಯರೂ, ದೇವಸ್ಥಾನದ ಸಿಬ್ಬಂದಿಗಳು,ದೇವರ ಸೇವೆ ಮಾಡುವವರೂ, ಅರ್ಚಕರು,ಸುತ್ತ ಮುತ್ತಲಿನ ಗ್ರಾಮಸ್ಥರು, ಭಕ್ತರೂ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!