Hightech Underpass: ಹೈ ಟೆಕ್ ಸ್ಫರ್ಷ ಪಡೆಯಲಿದೆ ಪಾಲಿಕೆ ಮುಂಬಾಗದ ಅಂಡರ್ ಪಾಸ್‌ | ಕಾಮಗಾರಿ ವಿಕ್ಷೀಸಿದ ಮೇಯರ್ ಎಸ್ ಟಿ ವಿರೇಶ್

IMG-20210928-WA0039

ದಾವಣಗೆರೆ: ಮಹಾನಗರ ಪಾಲಿಕೆಯ ಎದುರುಗಡೆ ಇರುವ ಅಂಡರ್ ಪಾಸ್‌ನಲ್ಲಿ ಪಾದಚಾರಿಗಳ ಹಾಗೂ ವಾಹನ ಸಂಚಾರಕ್ಕೆ ಅನುಕೂಲವಾಗುವ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಹೈಟೆಕ್ ಕೆಳ ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಿದ್ದ ಮೇಯರ್ ಎಸ್.ಟಿ. ವೀರೇಶ್ ಅವರು ಮಂಗಳವಾರ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಳೆದ ಮೂರು ದಶಕಗಳಿಂದಲೂ ಸಮಸ್ಯೆಯ ಆಗರವಾಗಿರುವ ಈ ಅಂಡರ್ ಪಾಸ್ ಹೈಟೆಕ್ ಆಗುತ್ತಿದ್ದು, ಅಧಿಕಾರಿಗಳ ಜೊತೆ ತೆರಳಿ ಮೇಯರ್ ವೀರೇಶ್ ಅವರು ಕೆಲಸದ ಪ್ರಗತಿಯ ಬಗ್ಗೆ ಮಾಹಿತಿ ಪಡೆದುಕೊಂಡರು.

ಆಟೋಮೆಟಿಕ್ ಮೋಟಾರ್ ಅಳವಡಿಸುವುದು ಹಾಗೂ ಸುಸಜ್ಜಿತವಾದ ಪೇಂಟಿಂಗ್ ವ್ಯವಸ್ಥೆ ಮಾಡುವ ಕುರಿತಂತೆ ಪರಿಶೀಲನೆ ನಡೆಸಿದರು. ಮಾತ್ರವಲ್ಲ, ಈ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿಯೇ ಯೋಜನೆ ರೂಪಿಸಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಿದರು.

ಮಳೆ ಬಂದಾಗ ಜನರು ಅನುಭವಿಸುವ ಸಮಸ್ಯೆ ಅಷ್ಟಿಷ್ಟಲ್ಲ. ಅಂಡರ್ ಪಾಸ್‌ನಲ್ಲಿ ನೀರು ನಿಲ್ಲುತ್ತದೆ. ವಾಹನಗಳ ಸಂಚಾರಕ್ಕೂ ಅಡಚಣೆ ಉಂಟಾಗುತ್ತದೆ. ಕಾಮಗಾರಿ ಕಳಪೆ ಆಗಬಾರದು. ಗುಣಮಟ್ಟದಿಂದ ಕೂಡಿರುವ ಜೊತೆಗೆ ವೇಗವಾಗಿ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ಪಾಲಿಕೆಯ ಆಯುಕ್ತ ವಿಶ್ವನಾಥ ಮುದಜ್ಜಿ, ಇಂಜಿನಿಯರ್‌ಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!