ಉಡುಪಿ ಜಿಲ್ಲೆಯಲ್ಲಿ “ಯಕ್ಷ ಸೌರಭ” ತಂಡದಿಂದ ಯಕ್ಷಗಾನ ಪ್ರದರ್ಶನ
ದಾವಣಗೆರೆ: ದಾವಣಗೆರೆಯ “ಯಕ್ಷ ಸೌರಭ” ಯಕ್ಷಗಾನ ತಂಡದಿಂದ ಉಡುಪಿ ಜಿಲ್ಲೆಯ ಸೌಕೂರಿನಲ್ಲಿ ದಿನಾಂಕ 05-12-2021 ರಂದು “ಮಧುರಾ ಮಹೇಂದ್ರ” ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಯಕ್ಷಸೌರಭ ತಂಡದ ಗುರುಗಳಾದ ಕರ್ಜೆ ಸೀತಾರಾಮ ಆಚಾರ್ಯರು ತಿಳಿಸಿದ್ದಾರೆ.
ಸಾಮಾನ್ಯವಾಗಿ ಯಕ್ಷಗಾನ ಕಲೆಯ ತವರೂರಾದ ಕರಾವಳಿ ಜಿಲ್ಲೆಗಳ ಯಕ್ಷಗಾನ ತಂಡಗಳು ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಹೋಗಿ ಯಕ್ಷಗಾನ ಪ್ರದರ್ಶನ ನೀಡುವುದು ವಾಡಿಕೆ. ಆದರೆ ಬಯಲುಸೀಮೆ ಪ್ರದೇಶವಾದ ದಾವಣಗೆರೆಯಿಂದ ಯಕ್ಷಗಾನ ತಂಡವೊಂದು ಯಕ್ಷಗಾನದ ತವರು ಉಡುಪಿ ಜಿಲ್ಲೆಗೆ ಹೋಗಿ ಪ್ರದರ್ಶನ ನೀಡುವುದು ಹೆಮ್ಮೆಯ ವಿಷಯವಾಗಿದೆ. ಈ ಗೌರವಕ್ಕೆ ಪಾತ್ರವಾದ ಯಕ್ಷಗಾನ ಗುರು ಕರ್ಜೆ ಸೀತಾರಾಮ ಆಚಾರ್ಯ ಸಾರಥ್ಯದ ಯಕ್ಷಸೌರಭ ತಂಡಕ್ಕೆ ಇದು ಅಪೂರ್ವ ಅವಕಾಶವಾಗಿದೆ ಎಂದು ತಂಡದ ಅಧ್ಯಕ್ಷರಾದ ರಾಜಶೇಖರ ಸಕ್ಕಟ್ಟು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಿನಾಂಕ 05-12-2021 ರಂದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸೌಕೂರಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾ ಭವನದಲ್ಲಿ ಬಣ್ಣದ ಸಕ್ಕಟ್ಟು ಶ್ರೀ ಲಕ್ಷ್ಮೀನಾರಾಯಣಯ್ಯ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾಗಿರುವ ಬಣ್ಣದ ಸಕ್ಕಟ್ಟು ಪ್ರಶಸ್ತಿ ಹಾಗೂ ರಾಜ ಋಷಿ ರವೀಂದ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ “ಮಧುರಾ ಮಹೇಂದ್ರ” ಎನ್ನುವ ಪೌರಾಣಿಕ ಕಥಾನಕದ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಯಕ್ಷಗಾನ ಕ್ಷೇತ್ರದ ಖ್ಯಾತ ಭಾಗವತರಾದ ಜನ್ಸಾಲೆ ರಾಘವೇಂದ್ರ ಆಚಾರ್ಯರ ಭಾಗವತಿಕೆಯೊಂದಿಗೆ, ಮುಮ್ಮೇಳದಲ್ಲಿ ಕುII ಸಿ.ಅಮೂಲ್ಯ, ಕುII ಪ್ರಜ್ಞಾ, ಕುIIಅನಿರುದ್ಧ ಉಪಾಧ್ಯ, ಕುII ಭಾರ್ಗವ, ಕುII ರೋಹಿತ್, ಕುII ಸಿಂಧು, ಕುII ಅನಘ ಉಪಾಧ್ಯ, ಕುIIಹರ್ಷಿತಾ ಪ್ರಸಾದ್, ಶ್ರೀನಿವಾಸ ಉಪಾಧ್ಯ, ಕುII ಸಹನಾ ಸೇರಿಗಾರ, ಕುII ಮಾನ್ಯಶ್ರೀ, ರಾಜಶೇಖರ ಸಕ್ಕಟ್ಟು, ರಕ್ಷಾ ರಾಜಶೇಖರ್ ಸಕ್ಕಟ್ಟು ಮುಂತಾದವರು ಪಾತ್ರ ನಿರ್ವಹಣೆ ಮಾಡಲಿದ್ದಾರೆ ಎಂದು ಯಕ್ಷ ಸೌರಭ ತಂಡದ ಗೌರವ ಸಲಹೆಗಾರರಾದ ಶ್ರೀಕಾಂತ್ ಭಟ್ ಮತ್ತು ಸಾಲಿಗ್ರಾಮ ಕೆ.ರಾಘವೇಂದ್ರ ನಾಯರಿ ತಿಳಿಸಿದ್ದಾರೆ.
ಕರ್ಜೆ ಸೀತಾರಾಮ ಆಚಾರ್ಯ
ಯಕ್ಷ ಗುರುಗಳು,ಯಕ್ಷ ಸೌರಭ
ದಾವಣಗೆರೆ,ಮೊ: 8197536661