Ummul Kher: ಸ್ಫೂರ್ತಿಯ ಚಿಲುಮೆ ಕೊಳೆಗೇರಿಯ “ಉಮ್ಮುಲ್ ಖೇರ್” ಎಂಬ ಅಸಾಧಾರಣ ಪ್ರತಿಭೆ

ನವದೆಹಲಿ: ಪ್ರತಿಯೊಂದು ಯಶಸ್ಸಿನ ಹಿಂದೆ ಪರಿಶ್ರಮವು ಇದ್ದೇ ಇರುತ್ತದೆ ಆ ಪರಿಶ್ರಮದ ಫಲದ ಹಿಂದೆ ನೂರೆಂಟು ನೋವು ಕಷ್ಟಗಳು ಇರುತ್ತವೆ ಅವಾಮಾನವಿರುತ್ತದೆ. ಅಂಥ ಕಷ್ಟಗಳನ್ನು ಅವಮಾನಗಳನ್ನು ಮೆಟ್ಟಿ ನಿಂತು ಸಾಧಿಸುವ ಛಲ ಇದ್ದಾಗ ಮಾತ್ರ ಸಾಧನೆಯ ಗುರಿ ಸಾಧ್ಯವಾಗುತ್ತದೆ. ಈ ತರಹದ ಎಷ್ಟೋ ಪ್ರತಿಭೆಗಳು ನಮ್ಮ ಸುತ್ತಮುತ್ತಲೂ ಇರುತ್ತಾರೆ ಹಲವರಿಗೆ ಅವರು ಸ್ಫೂರ್ತಿಯಾಗಿರುತ್ತಾರೆ. ಈ ರೀತಿ ಅನೇಕ ಯುವ ಮನಸ್ಸುಗಳಿಗೆ ಯುವಕರಿಗೆ ಸಾಧನೆ ಮಾಡುವ ಛಲವಿರುವವರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ ನನ್ನ ಈ ಲೇಖನದ ನಾಯಕಿ.
ಜೀವನದಲ್ಲಿ ಕಡು ಬಡತನ ಇದ್ದರೂ ಕೂಡ ತಾನು ಕಂಡ ಕನಸು ನನಸಾಗಬೇಕೆಂಬ ಛಲವಂತೆ. ಕನಸನ್ನ ನನಸು ಮಾಡಿ ಈಗ ಉನ್ನತ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸಾಹಸಗಾಥೆ *ಉಮ್ಮುಲ್ ಖೇರ್* ಹಲವರಿಗೆ ದಾರಿದೀಪವಾಗಿರುವುದು ಸುಳ್ಳಲ್ಲ .

ದೇಶದ ರಾಜಧಾನಿ ದೆಹಲಿಯ ನಿಜಾಮುದ್ದೀನ್ ಪ್ರದೇಶದ ಕೊಳೆಗೇರಿಯಲ್ಲಿ ತನ್ನ ಬಾಲ್ಯದ ಜೀವನವನ್ನು ಕಳೆದವಳು ಉಮ್ಮುಲ್ ಖೇರ್ . ಇವರ ತಂದೆ ದೆಹಲಿಯ ಬೀದಿ ಬದಿ ವ್ಯಾಪಾರ ಮಾಡಿದರೆ ತಾಯಿ ಜೀವನ ಸಾಗಿಸಲು ಬಟ್ಟೆ ಮಾರುತ್ತಿದ್ದರು ಹೀಗೆ, ಹೇಗೋ ಬದುಕು ನಡೆಯುತ್ತಿದೆ ಎಂದಾಗ ದೆಹಲಿ ಸರ್ಕಾರ ಈ ಕೊಳೆಗೇರಿಗಳ ನೆಲಸಮಕ್ಕೆ ಮುಂದಾಗುತ್ತದೆ ಮೊದಲೇ ಕಷ್ಟಪಟ್ಟು ಜೀವನ ನಿರ್ವಹಣೆ ಮಾಡುತ್ತಿದ್ದ ಈ ಕುಟುಂಬಕ್ಕೆ ಮತ್ತೊಂದು ದೊಡ್ಡ ಆಘಾತವೇ ಎದುರಾಗುತ್ತದೆ ಕೊನೆಗೆ ಮತ್ತೊಂದು ಕೊಳೆಗೇರಿಗೆ ಉಮ್ಮುಲ್ ಖೇರ್ ಅವರ ಕುಟುಂಬ ಸ್ಥಳಾಂತರವಾಗುತ್ತದೆ.
ರಾಜಸ್ಥಾನ್ ಮೂಲದ ಉಮ್ಮುಲ್ ಖೇರ್ ಹುಟ್ಟಿದ್ದು ರಾಜಸ್ಥಾನದಲ್ಲಿ ಹುಟ್ಟುವಾಗಲೇ ಮೂಳೆ ರೋಗಕ್ಕೆ ತುತ್ತಾಗಿದ್ದ ಇವರು 8 ಬಾರಿ ಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಈಕೆಯನ್ನು ಉಳಿಸಿಕೊಳ್ಳಲು ಕುಟುಂಬ ಸಾಕಷ್ಟು ಕಷ್ಟ ಅನುಭವಿಸಬೇಕಾಯಿತು. ಕೊನೆಗೆ ಇವರ ಕುಟುಂಬವು ಜೀವನದ ಆಸರೆ ಹುಡುಕಿ ದೆಹಲಿಯ ಒoದು ಕೊಳೆಗೇರಿಯಲ್ಲಿ ಬದುಕನ್ನು ಕಟ್ಟಿಕೊಂಡಿತ್ತು. ಕೊಳೆಗೇರಿ ಎಂದರೆ ನಮಗೆಲ್ಲ ಗೊತ್ತಿರುವ ಹಾಗೆ ಬಹು ಕಷ್ಟದ ಜೀವನ. ಈ ಕಷ್ಟದ ಜೀವನದ ನಡುವೆಯೂ ತಾನು *ಐಎಎಸ್* ಅಧಿಕಾರಿಯಾಗಬೇಕೆಂಬ ಬಹುದೊಡ್ಡ ಕನಸು ಅವರಸಾಗಿತ್ತು. ಇದೇ ಕಾರಣದಿಂದ ತನ್ನ ಗುರಿ ಮುಟ್ಟುವವರೆಗೂ ಈಕೆ ಯಾವುದೇ ಕಷ್ಟಕ್ಕೂ ಎದೆಗುಂದಲಿಲ್ಲ ಧೈರ್ಯದಿಂದ ಮುನ್ನುಗ್ಗಿ ಸಾಧನೆಯ ಗುರಿಯೆಡೆಗೆ ಪ್ರಯತ್ನ ಮುಂದುವರೆಸಿದರು .
ಜೀವನದುದ್ದಕ್ಕೂ ಕಷ್ಟಗಳು ಇದ್ದರೂ ಕೂಡ ತನ್ನ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಅವಳಿಗೆ ಎಂದಿಗೂ ತೊಂದರೆಗಳು ತೊಂದರೆಗಳಾಗಿ ಕಾಣಲೇ ಇಲ್ಲ . ತನ್ನ ಕನಸನ್ನು ನನಸಾಗಿಸುವ ಛಲ ಹೊಂದಿದ್ದರೂ ಉಮ್ಮುಲ್ ಖೇರ್ . ಈ ನಡುವೆ ಕುಟುಂಬಸ್ಥರಿಗೆ ಜೀವನ ನಡೆಸುವುದು ತುಂಬಾ ಕಷ್ಟವಾಯ್ತು ಆರ್ಥಿಕ ಪರಿಸ್ಥಿತಿ ಕೈಮೀರಿ ಹೋಗಿತ್ತು ಆ ಸಂದರ್ಭದಲ್ಲಿ ತನ್ನ ತಂದೆ ತಾಯಿಗಳು ತನ್ನ 8ನೆ ತರಗತಿ ಆದ ಬಳಿಕ ಓದನ್ನು ಕೈಬಿಡುವಂತೆ ತಿಳಿಸಿದರು ಆದರೆ ತನ್ನ ಓದುವ ಆಸೆಯಿತ್ತು ಅರ್ಧಕ್ಕೆ ಮೊಟಕು ಗೊಳಿಸದೆ ಅದನ್ನು ಮುಂದುವರೆಸಿದಳು ಅದಕ್ಕೆ ಬೇಕಾದ ಆರ್ಥಿಕ ಹಾಗೂ ಹಣದ ವ್ಯವಸ್ಥೆಯನ್ನು ತಾನೆ ಮಾಡಲು ನಿರ್ಧರಿಸಿದಳು ಆಗ ನೆನಪಿಗೆ ಹೊಳೆದಿದ್ದೆ ಮನೆಪಾಠ. ತನ್ನ ಕೊಳಗೇರಿ ಮಕ್ಕಳಿಗೆ ಮನೆ ಪಾಠ ಮಾಡಲು ಮುಂದುವರಿಸಿ ಅವರಿಂದ ಬಂದಂತಹ ಹಣದಿಂದ ತನ್ನ ಓದನ್ನು ಮುಂದುವರಿಸಲು ಇದರಿಂದ ಉಮ್ಮುಲ್ ಖೇರ್ ತನ್ನ ಹತ್ತನೇ ತರಗತಿಯಲ್ಲಿ ಶೇ 91 ರಷ್ಟು ಅಂಕ ಪಡೆದು ಉತ್ತೀರ್ಣಳಾದಳು . ಹಾಗೆ ಓದನ್ನು ಮುಂದುವರಿಸಿದ ಉಮ್ಮುಲ್ ಖೇರ್ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 89 ರಷ್ಟು ಅಂಕಗಳನ್ನು ಗಳಿಸಿ ಎಲ್ಲರ ಮೆಚ್ಚುಗೆಗೆ ಪಡೆದಳು ಹಾಗೂ ನಂಬಿಕೆಗೆ ಅರ್ಹಳಾದಳು.
ನಂತರ ತನ್ನ ಪದವಿ ವಿದ್ಯಾಭ್ಯಾಸವನ್ನು ದೆಹಲಿ ವಿಶ್ವವಿದ್ಯಾನಿಲಯದಿಂದ ಪಡೆದಳು ಇಷ್ಟಕ್ಕೆ ಓದಿನ ಹಸಿವು ನೀಗದ ಉಮ್ಮುಲ್ ಖೇರ್ ಬಳಿಕ ಅಂತಾರಾಷ್ಟ್ರೀಯ ಸಂಬಂಧದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಳು. ಛಲಗಾತಿ ಉಮ್ಮಲ ಖೆರ್ ರವರ ಓದುವ ಆಸೆ ಕಡಿಮೆ ಆಗಿರುವ ಕಾರಣ ಎಂ ಫಿಲ್ ಮತ್ತು ಪಿಎಚ್ ಡಿಗೆ ಪ್ರವೇಶ ಪಡೆದಳು .
ಈ ಓದಿನ ನಡುವೆ ತನ್ನ ಗುರಿಯನ್ನು ಮರೆಯದ ಉಮ್ಮುಲ್ ಖೇರ್ **ಯುಪಿಎಸ್ ಸಿ* ಪರೀಕ್ಷೆಗೆ ತಯಾರಿ ನಡೆಸುತ್ತಲೇ ಇದ್ದಳು ಆಕೆಯ ಕಠಿಣ ಪರಿಶ್ರಮ ನಿರಂತರ ಪ್ರಯತ್ನ ಆತ್ಮವಿಶ್ವಾಸ ಸಾಧಿಸುವ ಛಲ ಅವಳನ್ನು 2017 ರಲ್ಲಿ ಮೊದಲ ಪ್ರಯತ್ನದಲ್ಲೇ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರನ್ನಾಗಿ ಮಾಡಿತ್ತು . ಅಲ್ಲದೆ ದೇಶಕ್ಕೆ 420 ನೇ ಸ್ಥಾನದಲ್ಲಿ ತಂದು ಕೂರುವಂತೆ ಮಾಡಿತ್ತು ಈ ಮೂಲಕ ಪೋಷಕರಿಗೆ ಕೀರ್ತಿ ಮತ್ತು ಗೌರವವನ್ನು ತಂದುಕೊಡುವಲ್ಲಿ ಯಶಸ್ವಿಯಾದಳು .
ಕೊಳಗೇರಿಯಲ್ಲಿ ಬೆಳೆದರೂ ಉಮ್ಮುಲ್ ಖೇರ್ ಕನಸು ಎಂದು ಕಮರಲು ಅವರು ಬಿಡಲಿಲ್ಲ ಈಗ ದೇಶದ ಉನ್ನತ ಹುದ್ದೆಗೆ ಉಮ್ಮುಲ್ ಖೇರ್ ಆಯ್ಕೆಗೊಂಡು ಪೋಷಕರಿಗೆ ಗರ್ವಪಡುವ ಮಗಳಾಗಿ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ ಅಲ್ಲದೆ ಈಕೆಯಂಥ ಅನೇಕ ಕನಸು ಹೊತ್ತವರಿಗೆ ಸ್ಫೂರ್ತಿಯ ಚಿಲುಮೆಯಾಗಿ ನಮ್ಮೆಲ್ಲರಿಗೆ ಜೀವಂತ ಉದಾಹರಣೆಯಾಗಿದ್ದಾರೆ ಉಮ್ಮಲ್ ಕೆರ್.
ಇಂದಿನ ಯುವ ಸಮುದಾಯದಲ್ಲಿ ಕಷ್ಟಗಳು ಏನೇ ಇದ್ದರೂ ಅವಮಾನಗಳು ಎಷ್ಟೇ ಆಗಿದ್ದರೂ ಉಮ್ಮುಲ್ ಖೇರ್ ಅವರಂಥ ಸಾಧಕರನ್ನು ಸ್ಫೂರ್ತಿಯಾಗಿಸಿಕೊಂಡು ಅವರಂತೆ ಎಲ್ಲರೂ ಉನ್ನತ ಗುರಿ ಸಾಧನೆಯೆಡೆಗೆ ಮುನ್ನುಗ್ಗುವುದು ಅವಶ್ಯಕವಾಗಿದೆ. ಕಷ್ಟಗಳನ್ನು ಅವಮಾನಗಳನ್ನು ಅವಕಾಶವನ್ನಾಗಿಸಿ ಕೊಳ್ಳುವುದು ಯುವಕರು ಕಲಿಯಬೇಕಿದೆ. ದೇಶದ ಯುವ ಜನತೆಗೆ ಉಮ್ಮಲ್ ಖೆರ್ ರವರು ಸಾಧನೆಯ ಸ್ಫೂರ್ತಿಯ ಚಿಲುಮೆಯಾಗಿರಲಿ.
ವೆಂಕಟೇಶ್ ಬಾಬು ಎಸ್ ಸಹಾಯಕ ಪ್ರಾಧ್ಯಾಪಕರು ದಾವಣಗೆರೆ 9844077858

 
                         ವೆಂಕಟೇಶ್ ಬಾಬು ಎಸ್ ಸಹಾಯಕ ಪ್ರಾಧ್ಯಾಪಕರು ದಾವಣಗೆರೆ 9844077858
ವೆಂಕಟೇಶ್ ಬಾಬು ಎಸ್ ಸಹಾಯಕ ಪ್ರಾಧ್ಯಾಪಕರು ದಾವಣಗೆರೆ 9844077858 
                       
                       
                       
                       
                       
                       
                      