ಮುಲ್ಕಿ : ಪ್ರಿಯತಮೆ ಅಗಲಿಕೆ ತಾಳಲಾರದೆ ರೈಲಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆ

ಮುಲ್ಕಿ : ರೈಲ್ವೇ ಗೇಟ್ ಬಳಿ ಯುವಕನೋರ್ವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಅತಿಕಾರಿಬೆಟ್ಟು ಮೈಲೊಟ್ಟು ಎಂಬಲ್ಲಿ ನಡೆದಿದೆ.

ಸ್ಥಳೀಯ ನಿವಾಸಿ ಕಾರ್ತಿಕ್ ಪೂಜಾರಿ  ಅತ್ಮಹತ್ಯೆ ಮಾಡಿಕೊಂಡ ಯುವಕ ಎಂದು ಗುರುತಿಸಲಾಗಿದೆ.

ಮೃತ ಕಾರ್ತಿಕ್ ಪೂಜಾರಿ ತನ್ನ ತಾಯಿ ಅಜ್ಜಿ ಜೊತೆ ಮೈಲೊಟ್ಟಿನಲ್ಲಿ ನೆಲೆಸಿದ್ದು, ಕಳೆದ ಕೆಲವು ತಿಂಗಳ ಹಿಂದೆ ಚಿತ್ರದುರ್ಗದಲ್ಲಿ ಸಂಬಂಧಿಕರ ಗ್ಯಾರೇಜ್ ನಲ್ಲಿ ಮೆಕ್ಯಾನಿಕ್ ಆಗಿ ಕೆಲಸಕ್ಕೆ ಸೇರಿದ್ದನು. ಈ ನಡುವೆ ಕಾಲೇಜಿನಲ್ಲಿರುವಾಗ ಕಾರ್ತಿಕ್ ಪೂಜಾರಿ ಸಹಪಾಠಿ ಶರಣ್ಯ ಎಂಬಳನ್ನು ಪ್ರೀತಿಸುತ್ತಿದ್ದ. ಇಬ್ಬರು ಅಪ್ರಾಪ್ತರಾದ ಕಾರಣ ಮದುವೆಗೆ ಅನುಮತಿ ಸಿಕ್ಕಿಲ್ಲ. ಅಪ್ರಾಪ್ತರಾದ ಬಳಿಕ ಮದುವೆ ಮಾಡುವ ಬಾಂಡ್ ಪೇಪರ್ ಮೂಲಕ ಸಮ್ಮತಿ ದೊರೆತಿತ್ತು ಎನ್ನಲಾಗಿದೆ.


ಈ ನಡುವೆ ಶರಣ್ಯ ಮಾನಸಿಕ ಖಿನ್ನತೆಗೆ ಒಳಗಾಗಿ ಮೂಡುಬಿದ್ರೆಯ ತನ್ನ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಶುಕ್ರವಾರ  ಆತ್ಮಹತ್ಯೆ ಮಾಡಿಕೊಂಡಿದ್ದಳು.

ಕಾರ್ತಿಕ್‌ ಆಕೆಯ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಲು ಶನಿವಾರ ಮೂಡಬಿದಿರೆಗೆ ತೆರಳಿದ್ದರು. ಆಕೆಯ ಮೃತದೇಹವನ್ನು ವೀಕ್ಷಿಸಲು ಮನೆಯವರು ಅವಕಾಶ ನೀಡಿರಲಿಲ್ಲ. ಇದರಿಂದ ಯುವಕ ಬೇಸರಗೊಂಡಿದ್ದ ಎಂದು ಆತನ ನಿಕಟವರ್ತಿಗಳು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!