ದಾವಣಗೆರೆಯಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ!ಮಹಾನಗರ ಪಾಲಿಕೆಯಿಂದ ನೋಟಿಸ್!

palike

ದಾವಣಗೆರೆ: ಕೆಎಂಸಿ ಕಾಯ್ದೆ ನಿಯಮಾವಳಿಗಳನ್ನು ಗಾಳಿಗೆ ತೂರಿ ಅನಧಿಕೃತ ಕಟ್ಟಡ (Unofficial Building,) ನಿರ್ಮಿಸಿರುವ ವ್ಯಕ್ತಿಯೊಬ್ಬರಿಗೆ ದಾವಣಗೆರೆ ಮಹಾನಗರ ಪಾಲಿಕೆ (Metropolitan Policy) ಸಹಾಯಕ ಕಾರ್ಯಪಾಲಕ ಅಭಿಯಂತರರು ನೋಟೀಸ್ (Notice)ಜಾರಿ ಮಾಡಿದ್ದಾರೆ. ದಾವಣಗೆರೆ (Davangere) ಯ ಮಹಾನಗರ ಪಾಲಿಕೆ ವ್ಯಾಪ್ತಿಯ ಮಂಡಿಪೇಟೆ ಮುಖ್ಯ ರಸ್ತೆಯಲ್ಲಿ ಬರುವ ಡೋರ್ ನಂಬರ್ 298/2ರಲ್ಲಿ ಗಜಾನನ ವಾಸುದೇವ ವರ್ಣೇಕರ್ ಎಂಬುವರು ವಾಣಿಜ್ಯ ಉದ್ದೇಶಕ್ಕಾಗಿ ಕಟ್ಟಡ ನಿರ್ಮಿಸಿದ್ದಾರೆ. ಆದರೆ ಗಜಾನನ ವಾಸುದೇವ ವರ್ಣೇಕರ್ ಮಹಾನಗರ ಪಾಲಿಕೆ ನಿಯಗಳನ್ನು ಉಲ್ಲಂಘನೆ ಮಾಡಿ ಕಟ್ಟಡ ಕಟ್ಟಿದ್ದಾರೆ. ಈ ಕುರಿತು ಹರೀಶ್ ಹಳ್ಳಿ ದೂರು ದಾಖಲಿಸಿದ್ದಾರೆ.

ಪಾಲಿಕೆ ನಿಯಮಗಳನ್ನು ಗಾಳಿಗೆ ತೂರಿ ಕಟ್ಟಡ ನಿರ್ಮಿಸಲಾಗಿದ್ದು, ಕಟ್ಟಡ ನಿರ್ಮಿಸಲು ಪಡೆದ ಪರವಾನಿಗೆ ಪ್ರತಿ, ಸಂಬ0ಧಪಟ್ಟ ಮೂಲ ದಾಖಲೆಗಳೊಂದಿಗೆ ಪಾಲಿಕೆ ಕಚೇರಿಗೆ ಹಾಜರಾಗಲು ಈ ಹಿಂದೆಯೇ ತಿಳಿಸಲಾಗಿದೆ. ಹಲವು ಬಾರಿ ದಾಖಲೆಗಳ ಸಮೇತ ಕಚೇರಿಗೆ ಆಗಮಿಸುವಂತೆ ಸೂಚಿಸಿದ್ದರು ನೀಡಲಾದ ನೋಟೀಸ್‌ಗೆ ಸಮಜಾಯಿಷಿ ಉತ್ತರ ನೀಡದೇ ಮತ್ತು ಸೂಕ್ತ ದಾಖಲೆಗಳನ್ನು ಒದಗಿಸದೇ ಉದಾಸೀನ ತೋರಿದ್ದೀರಿ, ಪಾಲಿಕೆ ನೋಟೀಸ್ ತಲುಪಿದ 3 ದಿನಗಳ ಒಳಗಾಗಿ ಸಂಬ0ಧಪಟ್ಟ ದಾಖಲೆಗಳೊಂದಿಗೆ ಕಚೇರಿಗೆ ಹಾಜರಾಗುವಂತೆ ಮೇ.10, 2022ರಂದೆ ನೋಟೀಸ್ ಜಾರಿ ಮಾಡಿತ್ತು.

ಕ್ರಮಕೈಗೊಳ್ಳದ ದಾವಣಗೆರೆ ಮಹಾನಗರ ಪಾಲಿಕೆ:
ದಾವಣಗೆರೆ ಮಹಾನಗರ ಪಾಲಿಕೆ (Davangere Metropolitan Policy) ವ್ಯಾಪ್ತಿಯ ವಾರ್ಡ್ ಸಂಖ್ಯೆ – 19 (Ward Number – 19) ಮಂಡಿಪೇಟೆಯ ಮುಖ್ಯರಸ್ತೆಗೆ ಹೊಂದಿಕೊ0ಡಿರುವ ಓಸ್ವಾಲ ಜ್ಯೂಯಲರಿ ಕಟ್ಟಡವು ಕರ್ನಾಟಕ ಕೆಎಂಸಿ ಕಾಯ್ದೆ 1976 ಕಾಲಂ 321(3) (Karnataka KMC Act 1976 Column 321 (3)) ರನ್ವಯ ಮಹಾನಗರ ಪಾಲಿಕೆ ಕಟ್ಟಡವನ್ನು ಕಟ್ಟಿಕೊಳ್ಳಲು ಕಚೇರಿಯಿಂದ ಅನುಮೋದನೆಗೊಂಡ ನೀಲಿ ನಕಾಶೆಗೆ ವಿರುದ್ದವಾಗಿ ನಿಗಧಿತ ಅಳತೆಗಿಂತ ಸೆಟ್‌ಬ್ಯಾಕ್ ಬಿಡದೆ ಕಟ್ಟಡ ನಿರ್ಮಿಸಿಕೊಂಡಿರುವ ಬಗ್ಗೆ ದಿನಾಂಕ 3-3-2020ರಲ್ಲಿ ದೂರು ದಾಖಲಾಗಿದ್ದರು ಸಹ ಮಹಾನಗರ ಪಾಲಿಕೆಯು ಯಾವುದೇ ಕ್ರಮಕೈಗೊಳ್ಳಲಿಲ್ಲ.

ಈ ಕುರಿತು ದೂರುದಾರರು ತಕರಾರು ತೆಗೆದಾಗ ಕಚೇರಿ ಅಭಿಲೇಖಾದಲ್ಲಿ ಕಡತಗಳ ಪರಿಶೀಲನೆ ನಡೆಸಿದಾಗ ಕಂಡುಬ0ದ ದಾಖಲಾತಿಗಳಿಂದ ಇದು ಅನಧಿಕೃತ ಕಟ್ಟಡವೆಂದು ದಿನಾಂಕ 10-05-2022ರಂದು ಆಯುಕ್ತರು 7 ದಿನಗಳ ಒಳಗಾಗಿ ಅನಧಿಕೃತ ಕಟ್ಟಡವನ್ನು ಕರ್ನಾಟಕ ಕೆಎಂಸಿ ಕಾಯ್ದೆ 1976 ಕಾಲಂ 321(3) ಅನ್ವಯ ತೆರವು ಮಾಡುವಂತೆ ಲಿಖಿತ ನೋಟಿಸ್ ಮೂಲಕ ಮಾಲೀಕರಿಗೆ ಸೂಚಿಸಿದರು ಸಹ ಅನಧಿಕೃತ ಕಟ್ಟಡ ತೆರವು ಮಾಡದೇ ಇರುವುದು ಪಾಲಿಕೆಯ ಜಾಣಕುರುಡುತನ ಹಾಗೂ ಬೇಜವಾಬ್ದಾರಿತನ ಎದ್ದುಕಾಣುತ್ತಿದೆ. ಈ ಬಗ್ಗೆ ಮಹಾನಗರ ಪಾಲಿಕೆ ಆಯುಕ್ತರು ಸರಿಯಾದ ಕ್ರಮಕೈಗೊಂಡು ಅನಧಿಕೃತ ಕಟ್ಟಡ ತೆರವಿಗೆ ಸೂಕ್ತ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಇದರ ಹಿಂದೆ ಪಾಲಿಕೆ ಕೈವಾಡ ಇದೆ ಎಂಬುದು ಸಾಬೀತಾಗಲಿದೆ.

garudavoice21@gmail.com 9740365719

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!