ಶಿವಮೊಗ್ಗದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮಿನಲ್ಲಿ ಅನಧಿಕೃತ ಗೊಬ್ಬರ, ಕೀಟನಾಶಕ ಸಂಗ್ರಹ! ಕ್ರಮಕ್ಕೆ ಸಾಮಾಜಿಕ ಕಾರ್ಯಕರ್ತ ಗಿರೀಶ್ ಆಗ್ರಹ
ದಾವಣಗೆರೆ : ಶಿವಮೊಗ್ಗದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಲ್ಲಿರುವ ಗೋದಾಮಿನಲ್ಲಿ ಅನಧಿಕೃತವಾಗಿ ಬೀಜ, ಗೊಬ್ಬರ, ಔಷಧಿಗಳನ್ನು ದಾಸ್ತಾನು ಮಾಡಿದ್ದಾರೆ. ಇದಕ್ಕೆ ಸಹಕರಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಬಿ.ಆರ್. ಗಿರೀಶ್ ಆಗ್ರಹಿಸಿದ್ದಾರೆ.
ಶಿವಮೊಗ್ಗ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ರೈತರಿಗಾಗಿ ರೈತರ ಕೃಷಿ ಚಟುವಟಿಕೆಗಳನ್ನು ಸಂರಕ್ಷಿಸಲು ಮತ್ತು ವ್ಯವಹಾರಕ್ಕೆ ಅನುಕೂಲವಾಗಲು ನಿಯಮಗಳ ಅಡಿಯಲ್ಲಿ ವ್ಯಾಪಾರಿಗಳಿಗೆ ಪರತ್ತುಗಳನ್ನು ವಿಧಿಸಿ, ಬಾಡಿಗೆ ಅಥವಾ ಲೀಸ್ ಆಧಾರದ ಮೇಲೆ ಮಳಿಗೆಗಳನ್ನು ಹಂಚುತ್ತದೆ. ಅಂತಹ ಮಳಿಗೆಗಳಲ್ಲಿ ಕೃಷಿಗೆ ಸಂಬ0ಧಿಸಿದ ಧವಸಗಳನ್ನು ಮಾತ್ರ ಸಂಗ್ರಹಿಸಿಡಬೇಕಾಗುತ್ತದೆ. ಆದರೆ, ಇಲ್ಲಿನ ಆದಿತ್ಯ ಎಂಟರ್ಪ್ರೈಸಸ್ ಎಂಬ ಸಂಸ್ಥೆಯವರು ಪರವಾನಗಿಯನ್ನು ಪಡೆಯದೇ ಅಕ್ರಮ ವಾಗಿ ಕೀಟನಾಶಕ, ಬಿಜ ಇನ್ನಿತರ ಸಾಮಾಗ್ರಿಗಳನ್ನು ದಾಸ್ತಾನು ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಬಗ್ಗೆ ತಾವು ಎಪಿಎಂಸಿ ಕಾರ್ಯದರ್ಶಿಗಳಿಗೆ ದೂರು ನೀಡಿದ್ದರೂ ಕೂಡ ಅವರು ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ನಿಯಮಗಳನ್ನ ಗಾಳಿಗೆ ತೂರಿದ್ದಾರೆ. ಆದ್ದರಿಂದ ಎಪಿಎಂಸಿಯ ಕಾರ್ಯದರ್ಶಿ ಮತ್ತು ಈ ಪ್ರಕರಣದಲ್ಲಿ ಶಾಮೀಲಾಗಿರುವ ಸಿಬ್ಬಂದಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಪ್ರಮುಖರಾದ ಉಮಾಮಹೇಶ್ವರ ನಾಯ್ಕ, ಸಂತೋಷ್ ನಾಯ್ಕ ಇದ್ದರು.
garudavoice21@gmail.com 9740365719