ಸತತ 5 ನೇ 19 ವರ್ಷದೊಳಗಿನ ವಿಶ್ವಕಪ್ ಕ್ರಿಕೆಟ್ ಗೆದ್ದ ಯಶ್ ಧುಲ್ ನಾಯಕತ್ವದ ಭಾರತ ತಂಡ
ವಸ್ಟ್ ಇಂಡೀಸ್: (ಆಂಟಿಗುವಾ) ಶನಿವಾರ ನಡೆದ ವೆಸ್ಟ್ ಇಂಡೀಸ್‌ನ ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಅಂಡರ್ 19 ವಿಶ್ವಕಪ್ ಪೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 4 ವಿಕೆಟ್ ಗಳಿಂದ ಸೋಲಿಸಿದ ಭಾರತವು ಐದನೇ ಸಲ ಪ್ರಶಸ್ತಿಯನ್ನು ಎತ್ತಿ ಹಿಡಿದಿದೆ. ಇದಕ್ಕೂ ಮೊದಲು ಭಾರತ 2000, 2008, 2012 ಮತ್ತು 2018ರಲ್ಲಿ U19 ವಿಶ್ವಕಪ್ ಗೆದ್ದಿತ್ತು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ದುಕೊಂಡು 44.5 ಓವರ್‌ಗಳಲ್ಲಿ ಆಲ್ ಔಟ್ ಆಗಿ 189 ರನ್ ಗಳಿಸಿತು. ಇಂಗ್ಲೆಂಡ್ ಇಡೀ ತಂಡ ಜವಾಬ್ದಾರಿಯುತ ಪ್ರದರ್ಶನ ನೀಡದೇ ಇದ್ದರೂ ತಂಡದ ಜೇಮ್ಸ್ ಕ್ಯೂ 116 ಎಸೆತಗಳಲ್ಲಿ 95 ರನ್ ಗಳಿಸಿ ಆಪದ್ಭಾಂದವನಾದರು.
ಇನ್ನುಳಿದಂತೆ ಜಾರ್ಜ್ ಥಾಮಸ್ 27, ಜೇಕಬ್ ಬೆಥೆಲ್ 2, ನಾಯಕ ಟಾಮ್ ಪ್ರೆಸ್ಟ್ ಡಕ್ ಔಟ್, ವಿಲ್ ಲಂಕ್ಷನ್ 4, ಜಾರ್ಜ್ ಬೆಲ್ ಡಕ್ ಔಟ್, ರೆಹಾನ್ ಅಹ್ಮದ್ 10, ಅಲೆಕ್ಸ್ ಹಾರ್ಟನ್ 10, ಜೇಮ್ಸ್ ಸೇಲ್ಸ್ ಅಜೇಯ 34, ಥಾಮಸ್ ಆಪ್ಟಿನ್‌ಲ್ ಡಕ್ ಔಟ್ ಮತ್ತು ಜೋಶ್ವಾ ಬೊಯ್ದನ್ 1 ರನ್ ಗಳಿಸಿದರು. ಹೀಗೆ ಜೇಮ್ಸ್ ನ್ಯೂ ಅಮೋಘ ಆಟದ ನೆರವಿನಿಂದ ಇಂಗ್ಲೆಂಡ್ ಹೀನಾಯ ಮೊತ್ತಕ್ಕೆ ಆಲ್ ಔಟ್ ಆಗುವುದರಿಂದ ತಪ್ಪಿಸಿಕೊಂಡು ಭಾರತ ಅಂಡರ್ 19 ತಂಡಕ್ಕೆ ಗೆಲ್ಲಲು 190 ರನ್‌ಗಳ ಗುರಿಯನ್ನು ನೀಡಿತು.
ಹೀಗೆ ಇಂಗ್ಲೆಂಡ್ ತಂಡ ನೀಡಿದ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾಗೆ ಉತ್ತಮ ಆರಂಭ ದೊರೆಯಲಿಲ್ಲ. ಭಾರತ ತಂಡದ ಆರಂಭಿಕ ಆಟಗಾರನಾದ ಅಂಗ್ರಿಷ್ ರಘುವಂಶಿ ಶೂನ್ಯಕ್ಕೆ ಔಟ್ ಆದರೆ ಮತ್ತೋರ್ವ ಆರಂಭಿಕ ಆಟಗಾರ ಹರ್ನೂರ್ ಸಿಂಗ್ 21 ರನ್ ಗಳಿಸಿದರು. ಹೀಗೆ ಬಹು ಬೇಗನೆ ಆರಂಭಿಕ ಆಟಗಾರರನ್ನು ಕಳೆದುಕೊಂಡ ಟೀಮ್ ಇಂಡಿಯಾಗೆ ಆಸರೆಯಾದದ್ದು ಮೂರನೇ
ಕ್ರಮಾಂಕದಲ್ಲಿ ಕಣಕ್ಕಿಳಿದ ಶೈಖ್ ರಷೀದ್. ಹೌದು, ಕಠಿಣ ಸಂದರ್ಭದಲ್ಲಿ ಟೀಮ್ ಇಂಡಿಯಾಗೆ ಆಸರೆಯಾದ ಶೇಖ್ ರಶೀದ್ 84 ಎಸೆತಗಳಲ್ಲಿ 50 ರನ್ ಗಳಿಸಿ ಜವಾಬ್ದಾರಿಯುತ ಆಟವನ್ನಾಡಿದರು. ಇನ್ನುಳಿದಂತೆ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಯಶ್ ಫುಲ್ 17 ರನ್, ರಾಜ್ ಬವಾ 35 ರನ್, ಕೌಶಲ್ ತಾಂಬೆ 1 ರನ್, ನಿಶಾಂತಂ ಸಿಂಧು ಅಜೇಯ 50 ರನ್ ಮತ್ತು ವಿಕೆಟ್ ಕೀಪರ್ ದಿನೇಶ್ ಬನ 5 ಎಸೆತಗಳಲ್ಲಿ ಅಜೇಯ 13 ರನ್ ಗಳಿಸಿದರು.
ಈ ಮೂಲಕ ಭಾರತ ಅಂಡರ್ 19 ತಂಡ 47.4 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿ 4 ವಿಕೆಟ್‌ಗಳ ಜಯವನ್ನು ಸಾಧಿಸಿ ಐದನೇ ಬಾರಿಗೆ ಅಂಡರ್ 19 ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.
ಸಂಕ್ಷಿಪ್ತ ಸ್ಕೋರ್ ವಿವರ:
ಇಂಗ್ಲೆಂಡ್ – U19-189 (44.5)
ಭಾರತ – U19-195/6 (47.4) ಪಂದ್ಯದ ಪುರುಷೋತ್ತಮ- ರಾಜ್ ಬಾವಾ(ಭಾರತ) ಸರಣಿಯ ಶ್ರೇಷ್ಟ ಆಟಗಾರ- ಡೆವಾಲ್ಟ್ ಬ್ರೆಸ್ (ದ.ಆಪ್ರಿಕಾ)
ಭಾರತ ಈ ಮೊದಲು 4 ಸಲ ಕಪ್ ಗೆದ್ದಿದೆ:
ಮೊಹಮ್ಮದ್ ಕೈಫ್ (2000), ವಿರಾಟ್ ಕೊಹ್ಲಿ (2008), ಉನ್ಮುಕ್ ಚಂದ್ (2012), ಪೃಥ್ವಿ ಶಾ (2018)
ಬಿಸಿಸಿಐ ನಿಂದ ನಗದು ಬಹುಮಾನ ಘೋಷಣೆ:
U19 ವಿಶ್ವಕಪ್ ಗೆದ್ದ ಯಶ್ ಧುಲ್ ನೇತೃತ್ವದ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಧ್ಯಕ್ಷ ಸೌರವ್ ಗಂಗೂಲಿ ಭಾನುವಾರ ಅಭಿನಂದಿಸಿದ್ದಾರೆ.
ವಿಶ್ವಕಪ್ ಅನ್ನು ಅದ್ಭುತ ರೀತಿಯಲ್ಲಿ ಗೆದ್ದಿದ್ದಕ್ಕಾಗಿ 19 ವರ್ಷದೊಳಗಿನ ತಂಡ ಮತ್ತು ಸಹಾಯಕ ಸಿಬ್ಬಂದಿ ಮತ್ತು ಆಯ್ಕೆದಾರರಿಗೆ ಅಭಿನಂದನೆಗಳು. ನಾವು ಘೋಷಿಸಿದ 40 ಲಕ್ಷ ನಗದು ಬಹುಮಾನವು ಒಂದು ಸಣ್ಣ ಶ್ಲಾಘನೆಯ ಸಂಕೇತವಾಗಿದೆ ಆದರೆ ಅವರ ಪ್ರಯತ್ನವು ಮೌಲ್ಯವನ್ನು ಮೀರಿದೆ.. ಭವ್ಯವಾದ ಸಂಗತಿಗಳು ಎಂದು ಗಂಗೂಲಿ ಟ್ವಿಟ್ ಮಾಡಿದ್ದಾರೆ.
BCCI ಕಾರ್ಯದರ್ಶಿ ಜಯ್ ಶಾ ಅವರು U19 ವಿಶ್ವಕಪ್ ವಿಜೇತ ತಂಡದ ಪ್ರತಿಯೊಬ್ಬ ಆಟಗಾರನಿಗೆ INR 40 ಲಕ್ಷ ಬಹುಮಾನವನ್ನು ಘೋಷಿಸಿದರು. ಸಹಾಯಕ ಸಿಬ್ಬಂದಿಯ ಪ್ರತಿಯೊಬ್ಬ ಸದಸ್ಯರು INR 25 ಲಕ್ಷ ಪಡೆಯುತ್ತಾರೆ ಎಂದು ಅವರು ಹೇಳಿದ್ದಾರೆ.