ರೈತರ ಹತ್ಯೆಗೈದ ಪಾತಕಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ : ಎಸ್ ಯು ಸಿ ಐ ಹಾಗೂ ಕೃಷಿ ಕಾರ್ಮಿಕ ಸಂಘದಿಂದ ಪ್ರತಿಭಟನೆ

ದಾವಣಗೆರೆ: ಲಖೀಂಪುರ ಖೇರಿಯ ರೈತರ ಹತ್ಯೆಗೈದ ಪಾತಕಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಅತ್ಯುಘ್ರ ಶಿಕ್ಷೆ ಜರುಗಿಸುವಂತೆ ಕೇಂದ್ರ ಗೃಹಖಾತೆ ರಾಜ್ಯ ಸಚಿವರನ್ನು ಸಚಿವ ಸ್ಥಾನದಿಂದ ಕೈ ಬಿಡುವಂತೆ ಆಗ್ರಹಿಸಿ ಸೋಷಲಿಸ್ಟ್‌ಯೂನಿಟಿ ಸೆಂಟರ್‌ಆಫ್‌ಇಂಡಿಯಾ (ಕಮ್ಯುನಿಸ್ಟ್) ಮತ್ತು ರೈತ-ಕೃಷಿ ಕಾರ್ಮಿಕ ಸಂಘ (ಆರ್‌ಕೆಎಸ್) ವತಿಯಿಂದ ಜಂಟಿಯಾಗಿ ಪ್ರತಿಭಟನೆ ನಡೆಸಲಾಯಿತು.
ತಹಶೀಲ್ದಾರ್ ಕಚೇರಿಯ ಎದುರು ಮಂಗಳವಾರ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಸಚಿವ ಮಿಶ್ರಾತೇನಿ ವಿರುದ್ಧ ಘೋಷಣೆ ಕೂಗಿ ಅತ್ಯಘ್ರ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.
ಕೇಂದ್ರ ಗೃಹಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾಥೇನಿ ಒಡ್ಡಿದ ಬೆದರಿಕೆಯ ವಿರುದ್ಧ ರೈತರು ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ ಗುಂಡಿನ ದಾಳಿಮೂಲಕ ಮತ್ತು ಬೆಂಗಾವಲು ವಾಹನ ಹತ್ತಿಸಿ ಮೂವರು ರೈತರನ್ನು ಕೊಲೆಗೈದಿರುವುದು ಖಂಡನೀಯ. ಕೂಡಲೇ ಸಚಿವ ಸ್ಥಾನದಿಂದ ಕೈಬಿಟ್ಟು, ಶಿಕ್ಷೆ ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕರಾಳ ಕೃಷಿ ಕಾಯ್ದೆಗಳು ಮತ್ತು ವಿದ್ಯುತ್ ಖಾಸಗೀಕರಣದ ವಿರುದ್ಧ ವೀರೋಚಿತವಾಗಿ ಹೋರಾಟ ನಡೆಸುತ್ತಿರುವ ರೈತ ಚಳುವಳಿಯನ್ನು ಹತ್ತಿಕ್ಕಲು ಮತ್ತು ನಿಷ್ಕ್ರಿಯಗೊಳಿಸಲು ಬಿಜೆಪಿ, ಆರ್‌ಎಸ್‌ಎಸ್ ಜೊತೆಗೂಡಿ ನಡೆಸುತ್ತಿರುವ ಫ್ಯಾಸಿಸ್ಟ್ ಸಂಚು ನಡೆಸಿದೆ ಎಂದು ಆರೋಪಿಸಿದರು.
ಈ ಘಟನೆಯಲ್ಲಿಒಟ್ಟು ೬ ಜನರು ಸಾವಿಗೀಡಾಗಿದ್ದು, ಹೋರಾಟದ ಪ್ರಮುಖ ಎಸ್‌ಕೆಎಂ ನಾಯಕರಾದ ಸರ್ದಾರ್ ತೇಜೀಂದರ್‌ಸಿಂಗ್ ಸೇರಿದಂತೆ ಹಲವಾರು ಹೋರಾಟ ನಿರತ ರೈತರು ಗಾಯಗೊಂಡಿದ್ದಾರೆ. ಗೃಹ ಖಾತೆರಾಜ್ಯ ಸಚಿವರು, ಮತ್ತು ಅವರ ಬೆಂಬಲಿಗರ ವಿರುದ್ಧ ಕೂಡಲೇ ಕ್ರಿಮಿನಲ್ ಪ್ರಕರಣ ನೋಂದಾಯಿಸಬೇಕೆಂದು ಮತ್ತು ಕೆಂದ್ರ ಸಚಿವಸ್ಥಾನದಿಂದ ಅವರನ್ನು ತಕ್ಷಣವೇ ವಜಾಗೊಳಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಂಜುನಾಥ್ ಕೈದಾಳೆ, ರೈತ ಕೃಷಿ ಕಾರ್ಮಿಕ ಸಂಘಟನೆಯ ರಾಜ್ಯ ಅಧ್ಯಕ್ಷರು ಡಾ. ಸುನೀತ್ ಕುಮಾರ್, ಅಪರ್ಣ ಬಿ.ಆರ್., ಹಿರೇಮಠ, ಜಬೀನಾ ಖಾನಾಮ್, ಮಂಜುನಾಥ್ ಕುಕ್ಕುವಾಡ, ನಾಗಜ್ಯೋತಿ, ನಾಗ ಸ್ಮಿತ, ಕಾವ್ಯ, ಅಭಿಷೇಕ್, ಗುರುಪ್ರಸಾದ್, ಮಂಜುನಾಥ್ ರೆಡ್ಡಿ, ಶಿವಾಜಿರಾವ್, ಮಮತಾ, ಬೀರಲಿಂಗಣ್ಣ ನೀರ್ಥಡಿ, ಮಧು ತೊಗಲೇರಿ ಇನ್ನಿತರರು ಇದ್ದರು.
