ಬೆಂಗಳೂರು ಉಸ್ತುವಾರಿ ವಿಷಯ ಮುಗಿದು ಹೋದ ಅಧ್ಯಾಯ.! 2023 ರ ಚುನಾವಣೆ ಬೊಮ್ಮಾಯಿ ನೇತೃತ್ವದಲ್ಲಿ ನಡೆಯುತ್ತೆ – ವಿ ಸೋಮಣ್ಣ

ದಾವಣಗೆರೆ: ದಾವಣಗೆರೆ ನಗರಕ್ಕೆ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ ವಸತಿ ಸಚಿವ ವಿ ಸೋಮಣ್ಣ ಸುದ್ದಿಗಾರರೊಂದಿಗೆ ಮಾತನಾಡಿ.
ಬೆಂಗಳೂರು ಉಸ್ತುವಾರಿ ಬಗ್ಗೆ ಯಾರಿಗೆ ಕೊಟ್ಟರೆ ಏನಪ್ಪಾ ಅದೊಂದು ಮುಗಿದು ಹೋದ ಅಧ್ಯಾಯ
ಈ ವಿಚಾರದಲ್ಲಿ ಮುಖ್ಯಮಂತ್ರಿಗಳಿಗೆ ಪರಮಾಧಿಕಾರ ವಿದ್ದು ಅವರೇ ತೀರ್ಮಾನಿಸುತ್ತಾರೆ
2023 ರ ಚುನಾವಣೆ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆಯುತ್ತದೆ.
ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಗಳ ಗೆಲುವು ನಿಶ್ಚಿತ ಸಿಂದಗಿಯಲ್ಲಿ ಶೇಕಡ 63% ಹಾಗೂ ಹಾನಗಲ್ ಕ್ಷೇತ್ರದಲ್ಲಿ ಶೇಕಡ 83% ಮತದಾನವಾಗಿದ್ದು ಸಿಂದಗಿ ಕ್ಷೇತ್ರದಲ್ಲಿ ಹತ್ತರಿಂದ ಇಪ್ಪತ್ತು ಸಾವಿರ ಮತಗಳ ಅಂತರದಿಂದ ಗೆಲುವು ನಿಶ್ಚಿತ ಎಂದರು.