Vaccination: ದಾವಣಗೆರೆ ತಾಲ್ಲೂಕಿನಲ್ಲಿ ಆಗಸ್ಟ್ 24 ರಂದು ಬೃಹತ್ ಲಸಿಕಾಕರಣ: ಒಂದೇ ದಿನ 11,800 ಲಸಿಕೆ ನೀಡುವ ಆರೋಗ್ಯ ಇಲಾಖೆ

ದಾವಣಗೆರೆ: ತಾಲ್ಲೂಕಿನಲ್ಲಿ ಆ. 24 ರಂದು ಕೋವಿಶೀಲ್ಡ್ 8,300 ಹಾಗೂ ಕೋವ್ಯಾಕ್ಸಿನ್‌ನ 3,500 ಸೇರಿದಂತೆ ಒಟ್ಟು 11,800 ಕೋವಿಡ್ ನಿರೋಧಕ ಲಸಿಕೆಯನ್ನು ವಿವಿಧ ಆರೋಗ್ಯ ಕೇಂದ್ರಗಳಲ್ಲಿ ನೀಡಲಾಗುವುದೆಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಲ್.ಡಿ. ವೆಂಕಟೇಶ್ ತಿಳಿಸಿದ್ದಾರೆ.
18 ವರ್ಷ ಮೇಲ್ಪಟ್ಟ ಎಲ್ಲ ಅರ್ಹರಿಗೂ ಲಸಿಕೆ ನೀಡಲಾಗುವುದು. ಗರ್ಭಿಣಿಯರು, ಬಾಣಂತಿಯರು, ಅಪೌಷ್ಠಿಕ ಮಕ್ಕಳ ಪೋಷಕರು, ಕಾಲೇಜು ವಿದ್ಯಾರ್ಥಿಗಳು, ಸಿಬ್ಬಂದಿಗಳು ಹಾಗೂ 2ನೇ ಡೋಸ್ ಪಡೆಯುವವರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ತಾಲ್ಲೂಕಿನಲ್ಲಿ ಹಂಚಿಕೆ ಮಾಡಲಾಗಿರುವ ಕೋವಿಶೀಲ್ಡ್ ಲಸಿಕೆ ಡೋಸ್‌ಗಳ ವಿವರ ಇಂತಿದೆ. ನಗರದ ಚಿಗಟೇರಿ ಜಿಲ್ಲಾಸ್ಪತ್ರೆ- 300, ಆಲೂರು, ಆಲೂರಹಟ್ಟಿ, ಆನಗೋಡು, ಅಣಜಿ, ಅರಸಾಪುರ, ಹೆಬ್ಬಾಳು, ಹೆಮ್ಮನಬೇತೂರು, ಹುಚ್ಚವ್ವನಹಳ್ಳಿ, ನಲಕುಂದ, ಶ್ಯಾಗಲೆ, ತೋಳಹುಣಸೆ ಆರೋಗ್ಯ ಸಂಸ್ಥೆಗಳಿಗೆ ತಲಾ 200 ಡೋಸ್. ದೊಡ್ಡಬಾತಿ, ಹೂವಿನಮಡು, ಲೋಕಿಕೆರೆ, ಮಾಯಕೊಂಡ ಆರೋಗ್ಯ ಸಂಸ್ಥೆಗಳಿಗೆ ತಲಾ 300 ಡೋಸ್. ಹೊನ್ನೂರು, ಕಕ್ಕರಗೊಳ್ಳ, ಕಂದಗಲ್ಲು, ಕೊಡಗನೂರು, ಮಳಲ್ಕೆರೆ ತಲಾ 100, ಐಗೂರು ಮತ್ತು ನೇರ್ಲಿಗೆ ತಲಾ 150, ಬಾಡಾ-120, ಹದಡಿ-500, ದಾವಣಗೆರೆಯ ಆಜಾದ್‌ನಗರ-400, ಬಾಷಾ ನಗರ-400, ಭಾರತ್ ಕಾಲೋನಿ-200, ನಗರ ಆರೋಗ್ಯ ಉಪಕೇಂದ್ರ-1ಕ್ಕೆ-500, ನಗರ ಆರೋಗ್ಯ ಕೇಂದ್ರ-02 ಹಾಗೂ 03ಕ್ಕೆ –ತಲಾ 200, ಹೆಚ್‌ಕೆಆರ್ ನಗರ-400, ನಿಟ್ಟುವಳ್ಳಿ ಕೇಂದ್ರ, ಎಸ್‌ಎಂಕೆ ನಗರ ಆರೋಗ್ಯ ಕೇಂದ್ರ ತಲಾ 200, ರೆಡ್‌ಕ್ರಾಸ್ ಸೊಸೈಟಿ-400, ಜಿಎಂಐಟಿ ಫಾರ್ಮಸಿ ಕಾಲೇಜು-80 ಸೇರಿದಂತೆ ಒಟ್ಟು 8300 ಕೋವಿಶೀಲ್ಡ್ ಲಸಿಕೆ ಹಂಚಿಕೆ ಮಾಡಲಾಗಿದೆ.
ಕೋವ್ಯಾಕ್ಸಿನ್ ಲಸಿಕೆ ಹಂಚಿಕೆ ಮಾಡಲಾಗಿರುವ ವಿವರ ಇಂತಿದೆ: ದಾವಣಗೆರೆಯ ಆಜಾದ್ ನಗರ ಕೇಂದ್ರ, ಬಾಷಾ ನಗರ, ಹೆಚ್‌ಕೆಆರ್ ನಗರ ಆರೋಗ್ಯ ಕೇಂದ್ರ ತಲಾ 500 ಡೋಸ್, ಭಾರತ್ ಕಾಲೋನಿ ಹಾಗೂ ನಿಟ್ಟುವಳ್ಳಿ ಆರೋಗ್ಯ ಕೇಂದ್ರ ತಲಾ 400, ದಾವಣಗೆರೆ ನಗರ ಆರೋಗ್ಯ ಕೇಂದ್ರ 01 ಕ್ಕೆ 270, ನಗರ ಆರೋಗ್ಯ ಕೇಂದ್ರ-03 ಕ್ಕೆ 400, ಜಿಎಂಐಟಿ ಫಾರ್ಮಸಿ ಕಾಲೇಜು-130 ಡೋಸ್ ಸೇರಿದಂತೆ ಒಟ್ಟು 3500 ಡೋಸ್ ಕೋವ್ಯಾಕ್ಸಿನ್ ಲಸಿಕೆ ಹಂಚಿಕೆ ಮಾಡಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.