ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ 250 ಕೋಟಿ ಅನುದಾನ ನೀಡಿ, ಇಲ್ಲವೇ ಬೇಟೆಗೆ ಅನುಮತಿ ನೀಡಿ – ಅಂಜುಕುಮಾರ್

ದಾವಣಗೆರೆ: ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ 250 ಕೋಟಿ ರೂ., ಅನುದಾನ ಬಿಡುಗಡೆ ಮಾಡುವಂತೆ ಸಾಮಾಜಿಕ ಕಾರ್ಯಕರ್ತ ಅಂಜುಕುಮಾರ್ ಒತ್ತಾಯಿಸಿದ್ದಾರೆ.

ಪರಿಶಿಷ್ಟ ಪಂಗಡಕ್ಕೆ ಸೇರಿರುವ ವಾಲ್ಮೀಕಿ ನಾಯಕ ಜನಾಂಗ ಆರ್ಥಿಕವಾಗಿ ಹಿಂದುಳಿದಿದ್ದು, ಆರ್ಥಿಕವಾಗಿ ದುರ್ಬಲವಾದ ವರ್ಗವನ್ನು ಪುನಃಶ್ಚೇತನಗೊಳಿಸಲು ಸಂವಿಧಾನದ ಆಶಯದಂತೆ ಶ್ರೀ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮವನ್ನು ಸರ್ಕಾರಗಳು ಸ್ಥಾಪಿಸಿರುವುದು ಅಭಿನಂದನಾರ್ಹ. ಆದರೆ ಆ ಶಯದ ಮೂಲ ಉದ್ದೇಶಕ್ಕೆ ಪೆಟ್ಟು ಬಿದ್ದಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮವು ಕಳೆದ ತಿಂಗಳಲ್ಲಿ ಸರ್ಕಾರಕ್ಕೆ 250 ಕೋಟಿ ರೂ. ಅನುದಾನ ಮಂಜೂರು ಮಾಡುವಂತೆ ಮನವಿ ಮಾಡಿದ್ದರೂ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳದೆ ಅನ್ಯ ಸಮುದಾಯಗಳಿಗೆ ಹೊಸದಾಗಿ ನಿಗಮಗಳನ್ನು ಸ್ಥಾಪಿಸಿ 500 ಕೋಟಿಯಷ್ಟು ಅನುದಾನ ಮಂಜೂರು ಮಾಡುತ್ತಿದೆ. ಸರ್ಕಾರವು ಈ ಕೂಡಲೇ ವಾಲ್ಮೀಕಿ ಅಭಿವೃದ್ಧಿ ನಿಗಮದ ಮನವಿಯಂತೆ ಅನುದಾನ ನೀಡಿ ಕೊರೋನ ಸಂಕಷ್ಟದಿಂದ ತಲ್ಲಣಗೊಂಡಿರುವ ಪರಿಶಿಷ್ಟ ಪಂಗಡದವರ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡಬೇಕು ಇಲ್ಲವೇ ಪರಿಶಿಷ್ಟ ಪಂಗಡದವರಿಗೆ (ವಾಲ್ಮೀಕಿ ನಾಯಕ) ತಮ್ಮ ಮೂಲ ಕುಲಕಸುಬಾದ ಬೇಟೆಯನ್ನಾಡಲು ವಿಶೇಷ ಅನುಮತಿಯನ್ನಾದರೂ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!