ವಾಲ್ಮೀಕಿ ಶ್ರೀಗಳ ವಿರುದ್ಧ ಅವಹೇಳನ: ಶೀಘ್ರ ಕ್ರಮಕ್ಕೆ ನಾಯಕ ಸಮಾಜ ಎಸ್ಪಿಗೆ ಮನವಿ

ದಾವಣಗೆರೆ: ರಾಜನಹಳ್ಳಿಯ ಶ್ರೀ ವಾಲ್ಮೀಕಿ ಗುರುಪೀಠದ ಸ್ವಾಮೀಜಿಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯ ಹಾಗೂ ಅವಹೇಳನಕಾರಿಯಾಗಿ ಆರೋಪಿಸಿರುವ ವ್ಯಕ್ತಿಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ನಾಯಕ ಸಮುದಾಯದ ಯುವ ಮುಖಂಡರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದರು.
ವಾಲ್ಮೀಕಿ ಗುರುಪೀಠದ ಶ್ರೀಗಳ ವಿರುದ್ಧ ವ್ಯಕ್ತಿಯೋರ್ವ ಆಧಾರ ರಹಿತವಾಗಿ ಅವಹೇಳನ ಮಾಡಿದ್ದು, ಆತನ ವಿರುದ್ಧ ತನಿಖೆ ನಡೆಸಿ, ಸಾಮಾಜಿಕ ಜಾಲತಾಣದಲ್ಲಿ ಆಗುತ್ತಿರುವ ಸಮುದಾಯದ ಮಾನಹಾನಿಯನ್ನು ತಡೆಯುವಂತೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ನಾಯಕ ಸಮಾಜದ ಯುವ ಮುಖಂಡರಾದ ಡಿ.ಸಿ. ಲಕ್ಷ್ಮಣ್ (ಧರ್ಮ), ಎನ್.ಹೆಚ್. ಹಾಲೇಶ್, ಪಿ.ಬಿ. ಅಂಜುಕುಮಾರ್, ಪ್ರಕಾಶ್ ಅವರಗೆರೆ, ಟಿ.ಎಸ್. ಕರಿಯಪ್ಪ, ಬಿ. ಮಲ್ಲಿಕಾರ್ಜುನ್, ನಿಟ್ಟೂರು ಅಜೇಯರ್, ಹದಡಿ ಹನುಮಂತ, ನಿಟುವಳ್ಳಿ ಕರಿಯಪ್ಪ, ಪಿ.ಎ. ಚಿರಂತನ್, ಎನ್. ಅಣ್ಣಪ್ಪ ಹಾಗೂ ಮತ್ತಿತರರು ಇದ್ದರು.