ವಾಣಿಜ್ಯಶಾಸ್ತ್ರ ಅವಕಾಶಗಳ ಸಾಗರ – ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ ವೆಂಕಟೇಶ್ ಬಾಬು

IMG-20210921-WA0003

 

ದಾವಣಗೆರೆ: ವಾಣಿಜ್ಯಶಾಸ್ತ್ರ ವಿಷಯವು ಅವಕಾಶಗಳ ಸಾಗರ ಸ್ವಲ್ಪ ಪಠ್ಯದ ಜತೆಗೆ ಕೌಶಲ್ಯಗಳನ್ನು ಬೆಳೆಸಿಕೊಂಡರೆ ಉದ್ಯೋಗ ಮಾರುಕಟ್ಟೆಯಲ್ಲಿ ವಾಣಿಜ್ಯ ಶಾಸ್ತ್ರದ ವಿದ್ಯಾರ್ಥಿಗಳಿಗೆ ಬಹು ಬೇಡಿಕೆ ಇದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ ವೆಂಕಟೇಶ್ ಬಾಬು ಅವರು ಹೇಳಿದರು
ಅವರು ಇಂದು ನಗರದ ಭದ್ರಾ ಪದವಿಪೂರ್ವ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರ ಗಳ ವಿದ್ಯಾರ್ಥಿಗಳಿಗೆ ಅವಕಾಶಗಳು ವಿಷಯದ ಕುರಿತು ಮಾತನಾಡಿದರು.

ದೇಶದ ಆರ್ಥಿಕ ಮತ್ತು ಹಣಕಾಸಿನ ನಿರ್ವಹಣೆಯ ವ್ಯವಸ್ಥೆಯಲ್ಲಿ ಶ್ಶಾಸ್ತ್ರದ ವಿದ್ಯಾರ್ಥಿಗಳೂ ಬಹು ಮುಖ್ಯ ಪಾತ್ರ ವಹಿಸುತ್ತಾರೆ ಇದರಿಂದ ದೇಶದಲ್ಲಿ ನಡೆಯುವ ಪ್ರತಿಯೊಂದು ಅಭಿವೃದ್ಧಿ ಕೆಲಸಗಳಲ್ಲಿ ವಾಣಿಜ್ಯ ಶಾಸ್ತ್ರ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಾರೆ ಎಂಬ ಹಿರಿಮೆ ನಮ್ಮ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಎಂದು ಹೇಳಿದರು. ವಾಣಿಜ್ಯ ವಿಭಾಗಕ್ಕೆ ಸೇರಲು ಕಾರಣ ಭರಪೂರ ಉದ್ಯೋಗಾವಕಾಶಗಳು ಇದೆ ಎಂಬ ಭಾವನೆಯಿಂದ ಸೇರಿಕೊಳ್ಳುತ್ತಾರೆ ಆದರೆ ವಾಣಿಜ್ಯ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ಅದಕ್ಕೆ ತಕ್ಕಂತೆ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಇಂದು ಅತ್ಯವಶ್ಯಕವಾಗಿದೆ. ಇದು ಕೌಶಲ್ಯ ಅಭಿವೃದ್ಧಿಯ ಯುಗ ಎಲ್ಲಿ ಕೌಶಲ್ಯವಿರುತ್ತದೆ ಅಂಥವರಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತದೆ.

ಬಿ.ಕಾಂ ಬಿಬಿಎ ಪದವಿ ಗಳಲ್ಲಿ ಕೌಶಲಾಧಾರಿತ ಶಿಕ್ಷಣ ನೀಡುವಲ್ಲಿ ಎಲ್ಲಾ ವಿಶ್ವವಿದ್ಯಾಲಯಗಳು ಇಂದು ಹೆಚ್ಚು ಆಸಕ್ತಿಯನ್ನು ತೋರುತ್ತಿವೆ. ಈ ಪದವಿಗಳಲ್ಲಿ ಕಲಿಯುವಾಗ ವ್ಯವಹಾರದ ಆಂತರಿಕ ಮತ್ತು ಬಾಹ್ಯ ಚಟುವಟಿಕೆಗಳ ಜತೆಗೆ ಲೆಕ್ಕಶಾಸ್ತ್ರದ ವಿಷಯಗಳನ್ನು ವಿದ್ಯಾರ್ಥಿಯು ಕಲಿಯುವದರಿಂದ ಕಾರ್ಪೊರೇಟ್ ವಲಯಗಳಲ್ಲಿ ಉದ್ಯೋಗ ಮಾಡುಲು ಸುಲಭವಾಗುತ್ತದೆ ಎಂದು ಹೇಳಿದರು. ವಿದ್ಯಾರ್ಥಿಗಳು ಕರೋನಾ ಸಮಯದಲ್ಲಿ ಓದನ್ನು ಮರೆತು ಇತರೆ ಚಟುವಟಿಕೆಗಳಲ್ಲಿ ತೊಡಗುವಂತಾಗಿದೆ ಓದಿನ ಹವ್ಯಾಸ ನಿರಂತರವಾಗಿದ್ದರೆ ಅದು ವಿದ್ಯಾರ್ಥಿ ಗಳಿಗೆ ಲಾಭದ ರೂಪದಲ್ಲಿ ಮುಂದೆ ದೊರೆಯುತ್ತದೆ ಓದುವ ಹವ್ಯಾಸವನ್ನು ಹಾಗೂ ಆಸಕ್ತಿಯನ್ನು ಕಡಿಮೆ ಮಾಡಿಕೊಳ್ಳ ಬಾರದು ನಿರಂತರ ಓದು ಸತತ ಪ್ರಯತ್ನ ಯಶಸ್ಸಿನ ದಾರಿ ಎಂದು ವಿದ್ಯಾರ್ಥಿಗಳಿಗೆ ಪ್ರೇರೇಪಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಸಂಸ್ಥಾಪಕರಾದ ಪ್ರೊ ಮುರುಗೇಂದ್ರಪ್ಪನವರು ಮಾತನಾಡುತ್ತಾ ವಿದ್ಯಾರ್ಥಿಗಳು ತಮ್ಮ ಆರೋಗ್ಯದ ಜತೆಗೆ ವಿದ್ಯಾಭ್ಯಾಸದ ಕಡೆ ಗಮನ ಕೊಡಬೇಕು ಸಂಪನ್ಮೂಲ ವ್ಯಕ್ತಿಗಳಿಂದ ಸಿಗುವ ಎಲ್ಲಾ ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನೀವು ಮುಂದೆ ಸಂಪನ್ಮೂಲ ವ್ಯಕ್ತಿಗಳಾಗಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಚಂದ್ರಪ್ಪನವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಕೊಟ್ರೇಶ್ ಅವರು ಪ್ರೊಫೆಸರ್ ಸುಮಾರವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!