ಡಿ 5 ರಂದು ‘ವೀಣಾ ಮಹಾಂತೇಶ್’ ಅವರ ‘ಕವನ ಸಂಕಲನ’ ಮತ್ತು ‘ಹೊನ್ನುಡಿ ಒಲುಮೆಯ ಕೊಳಲು’ ಹಾಗೂ ‘ಮನಸ್ಸೆಂಬ ಖಜಾನೆ’ ಲೋಕಾರ್ಪಣೆ

ದಾವಣಗೆರೆ: ವೀಣಾಮೃತ ಪ್ರಕಾಶನದ ವತಿಯಿಂದ ಡಿ.5 ರ ಇಂದು ನಗರದ ಕುವೆಂಪು ಕನ್ನಡಭವನದಲ್ಲಿ ಬೆಳಗ್ಗೆ ೧೧ಕ್ಕೆ ಬಿ.ಎಂ ವೀಣಾ ಮಹಾಂತೇಶ್ ಅವರ ಕವನ ಸಂಕಲನ ಮತ್ತು ಹೊನ್ನುಡಿ ಒಲುಮೆಯ ಕೊಳಲು ಹಾಗೂ ಮನಸ್ಸೆಂಬ ಖಜಾನೆ ಲೋಕಾರ್ಪಣೆಯಾಗಲಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಲೇಖಕಿ ಸತ್ಯಭಾಮ ಮಂಜುನಾಥ್ ಮಾತನಾಡಿ, ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಕಸಾಪ ನಿಕಟಪೂರ್ವ ಅಧ್ಯಕ್ಷ ಡಾ.ಮಂಜುನಾಥ್ ಕುರ್ಕಿ ಕೃತಿಗಳ ಲೋಕಾರ್ಪಣೆ ಮಾಡಲಿದ್ದಾರೆ.
ಒಲುಮೆಯ ಕೊಳಲು ಕೃತಿ ಕುರಿತು ವೈದ್ಯ ಸಾಹಿತಿ ಡಾ.ಶಶಿಕಲಾ ಕೃಷ್ಣಮೂರ್ತಿ, ಮನಸ್ಸೆಂಬ ಖಜಾನೆ ಕುರಿತು ಡಾ.ಗೀತಾ ಬಸವರಾಜ್ ಮಾತನಾಡಲಿದ್ದಾರೆ. ಡಿಡಿಪಿಐ ಜಿ.ಆರ್.ತಿಪ್ಪೇಸ್ವಾಮಿ, ವಕೀಲ ಕೆ.ಎನ್.ಜಗದೀಶ್ ಕುಮಾರ್, ಉಪನ್ಯಾಸಕ ಚಂದ್ರೇಗೌಡ, ವರದಿಗಾರರ ಕೂಟದ ಅಧ್ಯಕ್ಷ ಜಿ.ಎಂ ಆರ್ ಆರಾಧ್ಯ ಆಗಮಿಸಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಲೇಖಕಿ ವೀಣಾ ಮಹಾಂತೇಶ್, ಎನ್.ಎಸ್.ರಾಜು, ದಿಳ್ಯಪ್ಪ ಇದ್ದರು.