ವೀರಭದ್ರೇಶ್ವರ ಸ್ವಾಮಿಯ ಗುಗ್ಗಳ, ಮಹಾರಥೋತ್ಸವ

ದಾವಣಗೆರೆ: ತಾಲ್ಲೂಕಿನ ನಾಗರಸನಹಳ್ಳಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿಯ ಗುಗ್ಗಳ, ಕೆಂಡದಾರ್ಚನೆ ಮತ್ತು ಮಹಾರಥೋತ್ಸವವು ಏ. 4, 5 ಮತ್ತು 6 ರಂದು ನಡೆಯಲಿದೆ.
ಏ.4 ರಂದು ಮಂಗಳವಾರ ಸಾಯಂಕಾಲ ‘ಮುತ್ತೇನಹಳ್ಳಿ ಶ್ರೀ ದುರ್ಗಾಂಭಿಕಾದೇವಿ ಮತ್ತು ಶ್ರೀ ವೀರಭದ್ರೇಶ್ವರಸ್ವಾಮಿಯನ್ನು ಕರೆತರುವುದು, ಗ್ರಾಮದ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುವುದು. ಏ.5ರಂದು ನಾಗರಸನಹಳ್ಳಿಯಲ್ಲಿ ಶ್ರೀ ವೀರಭದ್ರೇಶ್ವರಸ್ವಾಮಿಯ ಗುಗ್ಗಳ ಮತ್ತು ಉಚ್ಚಯ ಕೆಂಡದಾರ್ಚನೆ ನಡೆಯುತ್ತದೆ. ಏ.6 ರಂದು ಗುರುವಾರ ಸಾಯಂಕಾಲ 4 ಗಂಟೆಯಿಂದ ಮಹಾರಥೋತ್ಸವ ನಡೆಯುತ್ತದೆ