ದಾವಣಗೆರೆಯ ಹಿರಿಯ ಪತ್ರಕರ್ತ ಇಂದಿನ ಸುದ್ದಿ ಪತ್ರಿಕೆಯ ಸಂಪಾದಕ ವೀರಪ್ಪ ಎಂ.ಬಾವಿ ನಿಧನ
ದಾವಣಗೆರೆ: ದಾವಣಗೆರೆ ದೇವರಾಜ್ ಅರಸು ಬಡಾವಣೆ ನಿವಾಸಿ ಹಾಗೂ ಇಂದಿನ ಸುದ್ದಿ ಪತ್ರಿಕೆ ಸಂಪಾದಕ ವೀರಪ್ಪ ಎಂ.ಭಾವಿ (63) ಅವರು 03-11-2024 ರಂದು ಭಾನುವಾರ ಬೆಳಗಿನ ಜಾವ 2:50ಕ್ಕೆ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಪುತ್ರಿ ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು 03-11-2024ರ ಭಾನುವಾರ ಸಂಜೆ 4 ಗಂಟೆಗೆ ದಾವಣಗೆರೆ ನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ.
ವೀರಪ್ಪ ಭಾವಿ ಅವರು ಕಳೆದ 45 ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. 30 ವರ್ಷಗಳಿಂದ ಇಂದಿನ ಸುದ್ಧಿ ಪತ್ರಿಕೆ ಸಂಪಾದಕರಾಗಿ, ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ವಿವಿಧ ಸಂಘ ಸಂಸ್ಥೆಗಳ ಸಂಚಾಲಕರಾಗಿ ವೀರೇಶ್ವರ ಮಠದ ಸಂಯೋಜಕರಾಗಿ ಕೆಲಸ ಮಾಡಿದ್ದಾರೆ. ಪತ್ರಿಕೋದ್ಯಮದ ಜೊತೆ ಸಮಾಜ ಸೇವೆ, ಶಿಕ್ಷಣ, ಆರೋಗ್ಯ ಸೇವಾ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು.
ಸಂತಾಪ;
ಅಗಲಿದ ಹಿರಿಯ ಪತ್ರಕರ್ತ ವೀರಪ್ಪ ಭಾವಿ ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರ, ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಸಂತಾಪ ಸೂಚಿಸಿದ್ದಾರೆ.