VIDEO: ಡಿ-ಬಾಸ್ ಅಭಿಮಾನಿಗಳಿಗಾಗಿ ಮತ್ತೊಂದು ‘ಕ್ರಾಂತಿ’ ಹಬ್ಬ: ದರ್ಶನ್ ಟೀಮ್ ತಯಾರಿ ಬಗ್ಗೆ ಸುಳಿವು ಕೊಟ್ಟ ರಚಿತಾ ರಾಮ್

VIDEO: Another 'Kranti' festival for D-Boss fans: Rachita Ram hints at Darshan's team preparations

ಕನ್ನಡ ಚಿತ್ರರಂಗದಲ್ಲಿ ಇದೀಗ ‘ಕ್ರಾಂತಿ’ ಚಿತ್ರದ್ದೇ ಮಾತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕ್ರಾಂತಿ’ ಸಿನಿಮಾ ಸ್ಯಾಂಡಲ್‌ವುಡ್ ಲೋಕದಲ್ಲಿ ಭಾರೀ ಹವಾ ಎಬ್ಬಿಸಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಪ್ರಚಾರ ಜೋರಾಗಿದ್ದು ದರ್ಶನ್ ಅಭಿಮಾನಿಗಳ ಪಾಲಿಗೆ ಈ ಬೆಳವಣಿಗೆಯು ಹಬ್ಬ ಸಂಭ್ರಮದಂತಾಗಿದೆ.

ಕಳೆದ ವಾರ ಮೈಸೂರಿನಲ್ಲಿ ಥೀಮ್ ಸಾಂಗ್ ಅನಾವರಣ ಮಾಡಿ ‘ಕ್ರಾಂತಿ’ ಜಾತ್ರೆಯ ಸನ್ನಿವೇಶವನ್ನು ಹುಟ್ಟು ಹಾಕಿದ್ದ ಚಿತ್ರ ತಂಡ, ಇದೀಗ ಈ ಸಿನಿಮಾದ ಎರಡನೇ ಹಾಡನ್ನು ಹೊಸಪೇಟೆಯಲ್ಲಿ ಅನಾವರಣ ಮಾಡಲು ತಯಾರಿ ನಡೆಸಿದೆ. ಆ ಕಾರ್ಯಕ್ರಮವನ್ನೂ ಮೈಸೂರಿನ ಸಮಾರಂಭದಂತೆ ಅದ್ಧೂರಿಯಾಗಿ ನಡೆಸಲು ದರ್ಶನ್ ಟೀಂ ತಯಾರಿಯಲ್ಲಿ ತೊಡಗಿದೆ. ಈ ಕಾರ್ಯಕ್ರಮ ಯಾವಾಗ ಎಲ್ಲಿ ಹೇಗೆ ನಡೆಯಲಿದೆ ಎಂಬ ಬಗ್ಗೆ ದರ್ಶನ್ ಅವರೇ ವೀಡಿಯೋ ಬೈಟ್ ಸಿದ್ದಪಡಿಸಿದ್ದು, ಆ ವೀಡಿಯೋವನ್ನು ನಟಿ ರಚಿತಾ ರಾಮ್ ಅವರು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!