ಜನರ ಆಪೇಕ್ಷೆಯಂತೆ ಶಿಕಾರಿಪುರದಲ್ಲಿ ವಿಜಯೇಂದ್ರ ಸ್ಪರ್ಧೆ: ಬಹಳ ಅಂತರದಿಂದ ಗೆಲ್ಲುವ ವಿಶ್ವಾಸ-ಮಾಜಿ ಸಿಎಂ ಬಿಎಸ್ ವೈ.

ಶಿವಮೊಗ್ಗ : ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಶಿಕಾರಿಪುರದಿಂದ ಸ್ಪರ್ಧೆಗೆ ಈಗಾಗಲೇ ಘೊಷಣೆ ಮಾಡಿದ್ದು ಈ ಮೂಲಕ ವರುಣಾಕ್ಷೇತ್ರದಿಂದ ಕಣಕ್ಕಿಳಿಯುವ ವಿಚಾರಕ್ಕೆ ತೆರೆ ಬಿದ್ದಿದೆ.
ಈ ಕುರಿತು ಶಿಕಾರಿಪುರದಲ್ಲಿ ಮಾತನಾಡಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಜನರ ಆಪೇಕ್ಷೆಯಂತೆ ಬಿವೈ ವಿಜಯೇಂದ್ರ ಶಿಕಾರಿಪುರದಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಬಹಳ ಅಂತರದಲ್ಲಿ ಬಿವೈ ವಿಜಯೇಂದ್ರ ಗೆಲ್ಲುವ ವಿಶ್ವಾಸವಿದೆ ಎಂದರು.
ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಈಗಾಗಲೇ ಎರಡು ದಿನಗಳ ಕಾಲ ಕೋರ್ ಕಮಿಟಿ ಸಭೆ ಆಗಿದೆ. ಶಿವಮೊಗ್ಗ, ಬೆಳಗಾವಿಯಲ್ಲಿ ಟಿಕೆಟ್ ಗೊಂದಲಕ್ಕೆ ಬ್ರೇಕ್ ಹಾಕುತ್ತೇವೆ ಎಂದು ಬಿಎಸ್ ಯಡಿಯೂರಪ್ಪ ತಿಳಿಸಿದರು.