ಹಳ್ಳಿ ಹೈದರ ಜಾಣ್ಮೆ ಎಷ್ಟು ಗೊತ್ತಾ…? ವಾಲಿಬಾಲ್ ಆಡಲು ಇವರು ಮಾಡಿದ ತಂತ್ರವೇನು..? ಈ ಸುದ್ದಿ ಓದಿ, ಶೇರ್ ಮಾಡಿ

ದಾವಣಗೆರೆ: ಅದಿಲ್ಲ, ಇದಿಲ್ಲ ಎನ್ನುವವರ ಮಧ್ಯೆ ಇರುವುದನ್ನೇ ಉಪಯೋಗಿಸಿಕೊಳ್ಳುವ ಜಾಣ್ಮೆ ಇರುವುದು ಕೆಲವು ಜನರಿಗೆ ಮಾತ್ರ ಕರಗತ. ಅದಕ್ಕೆ ಹರಿಹರದ ದೀಟೂರು ಗ್ರಾಮದ ಯುವಕರು ಸಾಕ್ಷಿಯಾಗಿ ನಿಂತಿದ್ದಾರೆ.
ವಾಲಿಬಾಲ್ ಅಂದರೆ ಈ ಯುವಕರಿಗೆ ಅಚ್ಚುಮೆಚ್ಚಿನ ಕ್ರೀಡೆ, ನೆಟ್ ತೆಗೆದುಕೊಳ್ಳಲು ಆರ್ಥಿಕ ತೊಂದರೆ ಅಥವಾ ಜಾಗದ ಕೊರತೆ ಇರುವ ಕಾರಣ ಶಾಲೆಯ ಕಬ್ಬಿಣದ ಗೇಟ್ ಗಳನ್ನೆ ನೆಟ್ ರೀತಿ ಬಳಸಿಕೊಂಡು ತಮ್ಮ ಆಶಯದ ವಾಲಿಬಾಲ್ ಆಡುವ ಮೂಲಕ ತೃಪ್ತಿಪಟ್ಟು ಖುಷಿಯಿಂದ ಆಟವಾಡುತ್ತಿದ್ದಾರೆ.
ಕೋವಿಡ್ ಹಿನ್ನೆಲೆಯಲ್ಲಿ ಶಾಲೆಗಳು ಇನ್ನೂ ಪ್ರಾರಂಭವಾಗದ ಹಿನ್ನೆಲೆಯಲ್ಲಿ ಮತ್ತು ಲಾಕ್ಡೌನ್ ಕಾರಣ ಮನೆಯಲ್ಲಿಯೇ ಇರಬೇಕಾದ ಸಂದರ್ಭ ಇದ್ದುದ್ದರಿಂದ, ನೂರಾರು ರೂಪಾಯಿ ಕೊಟ್ಟು ನೆಟ್ ಖರೀದಿಸಲು ಆಗದೆ, ಈ ಯುವಕರು ಶಾಲಾ ಗೇಟ್ ನ ಬಳಿ ಸೇರಿ ಅದನ್ನೇ ನೆಟ್ ಆಗಿ ಉಪಯೋಗಿಸಿಕೊಂಡು ಜಾಣ್ಮೆ ತೋರಿದ್ದಾರೆ.
ಉಳ್ಳವರ ಮಕ್ಕಳಿಗೆ ಎಲ್ಲವೂ ಸರಿಯಾಗಿಯೇ ಸಿಗಬೇಕು. ಇರುವುದನ್ನು ಜಾಣ್ಮೆಯಾಗಿ ಬಳಸಿಕೊಳ್ಳುವ ಬುದ್ಧಿವಂತಿಕೆ ಅವರಲ್ಲಿ ಕೊಂಚ ಕಡಿಮೆಯೇ, ಆದರೆ, ಬಡಜನರು ಇರುವುದನ್ನೇ ಸಮರ್ಥವಾಗಿ ಉಪಯೋಗಿಸಿ ಕೊಳ್ಳುವ ಕಲೆ ಅವರಿಗೆ ಕರಗತ.