ನೀತಿ ಸಂಹಿತೆ ಉಲ್ಲಂಘನೆ; ಒಟ್ಟು 4.21 ಕೋಟಿಯಷ್ಟು ನಗದು ಮತ್ತು ಇತರೆ ವಸ್ತು ವಶ – ಡಿಸಿ ಶಿವಾನಂದ ಕಾಪಶಿ

ನೀತಿ ಸಂಹಿತೆ ಉಲ್ಲಂಘನೆ; ಒಟ್ಟು 4.21 ಕೋಟಿಯಷ್ಟು ನಗದು ಮತ್ತು ಇತರೆ ವಸ್ತು ವಶ - ಡಿಸಿ ಶಿವಾನಂದ ಕಾಪಶಿ

ದಾವಣಗೆರೆ : ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಚೆಕ್‌ಪೋಸ್ಟ್ ವ್ಯವಸ್ಥೆ ಮಾಡಲಾಗಿದೆ. ಏಪ್ರಿಲ್ 23 ರಂದು ರೂ.50080 ಮೌಲ್ಯದ 94.03 ಲೀ ಮದ್ಯ ಮತ್ತು ರೂ.3071313 ಮೌಲ್ಯದ 2085 ಕುಕ್ಕರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ ವಿವಿಧ ಚೆಕ್‌ಪೋಸ್ಟ್ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳಲಾಗುತ್ತಿದ್ದು, ಇದುವರೆಗೆ ರೂ.9474057 ನಗದು, ರೂ.24135324.99 ಮೌಲ್ಯದ 22797.6 ಲೀ ಮದ್ಯ, 3.853 ಕೆ.ಜಿ ಮಾದಕ ವಸ್ತು ಅಂದಾಜು ಮೌಲ್ಯ ರೂ.71610, ರೂ.8498048 ಮೌಲ್ಯದ ಕುಕ್ಕರ್ ಸೇರಿದಂತೆ ಇತರೆ ವಸ್ತುಗಳು ಒಟ್ಟು ರೂ.4.21 ಕೋಟಿಯಷ್ಟು ನಗದು ಮತ್ತು ಇತರೆ ವಸ್ತುಗಳನ್ನು ನೀತಿ ಸಂಹಿತೆ ಆರಂಭವಾದಾಗಿನಿಂದ ಇಲ್ಲಿಯವರೆಗೆ ವಶಪಡಿಸಿಕೊಳ್ಳಲಾಗಿದೆ.
ಏ.23 ರಂದು ವಶಪಡಿಸಿಕೊಂಡ 94.03 ಲೀ ಮದ್ಯದಲ್ಲಿ 23.18 ಲೀ ಪೊಲೀಸ್ ಇಲಾಖೆ ಹಾಗೂ 70.85 ಲೀ ಅಬಕಾರಿ ಇಲಾಖೆಯಿಂದ ಕಾರ್ಯಾಚರಣೆ ಮಾಡಲಾಗಿದೆ.
ಮತ್ತು 2085 ಕುಕ್ಕರ್‌ಗಳನ್ನು ಚಿಕ್ಕಬೂದಿಹಾಳ್ ಹತ್ತಿರ ಎಫ್‌ಎಸ್‌ಟಿಯಿಂದ ವಶಪಡಿಸಿಕೊಂಡು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!