ವಿಶ್ವಗುರು ಬಸವ ಸೇನೆ ವತಿಯಿಂದ ಲಸಿಕೆ ಅಭಿಯಾನ: ದ್ವಿತೀಯ ಲಸಿಕೆ ಪಡೆದ ಬಸವಪ್ರಭು ಸ್ವಾಮೀಜಿ

 

ದಾವಣಗೆರೆ: ವಿಶ್ವಗುರ ಬಸವ ಸೇನೆ ವತಿಯಿಂದ ಲಸಿಕೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಬಸವ ಪ್ರಭು ಸ್ವಾಮೀಜಿ ಅವರು ಎರಡನೇ ಲಸಿಕೆ ಪಡೆದುಕೊಂಡು ಕಾರ್ಯಕ್ರಮವನ್ನು ಉದ್ಘಾಟಿಸಿ ಅಭಿಯಾನವನ್ನು ಉದ್ದೇಶಿಸಿ ಮಾತನಾಡಿ

ವಿಶ್ವದಲ್ಲಿನ ಕೊರೊನಾ ನಿಯಂತ್ರಣ ಸಾಧಿಸಲು ಲಸಿಕೆಯೇ ಮದ್ದು ಆಗಿದೆ ಹಾಗಾಗಿ ಪ್ರತಿಯೊಬ್ಬ ವ್ಯಕ್ತಿಯೂ ತಪ್ಪದೇ ವ್ಯಾಕ್ಸಿನೇಷನ್‌ ಮಾಡಿಸಿಕೊಂಡು ಕೊರೊನಾ ಹೊಡೆದೊಡಿಸಲು ಪಣತೊಡೋಣ.
ಕೊರೊನಾ ಬಂದು ಮಾನವನ ದುರಾಸೆಯ ದೌರ್ಜನ್ಯದ ಅಟ್ಟಹಾಸಕ್ಕೆ ಕಡಿವಾಣ ಹಾಕಿದೆ. ಎರಡನೇ ಅಲೆಯಲ್ಲಿ ಕೋಟಿ ಕೋಟಿ ಗಳಿಸಿದ ಜನರಿಗೂ ಆಮ್ಲಜನಕ ಬೆಡ್ ಸಿಗಲಿಲ್ಲ . ಆರೋಗ್ಯದ ಮಹತ್ವವನ್ನು ಕೊರೊನಾ ಹೇಳಿಕೊಟ್ಟಿದೆ. ಮಾನವನು ತಾನು ಗಳಿಸಿದ ಹಣ ,ಅಧಿಕಾರ, ಬಂಗಾರ ತನ್ನ ಜೊತೆಗೆ ಬರುವುದಿಲ್ಲ ತಾನು ಮಾಡಿದ ಸತ್ ಕಾರ್ಯ ಗಳು ಮಾತ್ರ ಬರುತ್ತವೆ ಎಂಬ ಸತ್ಯದ ಜೀವನ ಪಾಠವನ್ನು ಕೊರೊನಾ ನೀಡಿದೆ . ಒಳಿತು ಮಾಡಿ ಮಾನವ ಜನುಮವನ್ನು ಸಾರ್ಥಕ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ವಿರಕ್ತಮಠ ಹಾಗೂ ವಿಶ್ವಗುರು ಬಸವ ಸೇನೆ ಕೆಲಸ ಮಾಡುತ್ತಿವೆ ಎಂದರು.

ಯಶವಂತರಾವ ಜಾಧವ ಮಾತನಾಡಿ ಕೊರೊನಾ ಲಸಿಕೆಯನ್ನು ಎಲ್ಲರೂ ಪಡೆದುಕೊಳ್ಳಿ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೊದಲು ವ್ಯಾಕ್ಸಿನೇಷನ್‌ ಪ್ರಾರಂಭಿಸಿದಾಗ ಜನರ ಪ್ರತಿಕ್ರಿಯೆ ಮಂದಗತಿಯಲ್ಲಿ ಇತ್ತು ಈಗ ಎರಡನೇ ಅಲೆಯ ಭೀಕರವಾಗಿದ್ದರಿಂದ ಜನರು ವ್ಯಾಕ್ಸಿನೇಷನ್‌ ಪಡೆಯಲು ನುಗ್ಗುತ್ತಿದ್ದಾರೆ. ಸಮಾಧಾನದಿಂದ ಸಹಕರಿಸಿ ಎಲ್ಲರಿಗೂ ವ್ಯಾಕ್ಸಿನೇಷನ್‌ ವ್ಯವಸ್ಥೆಯನ್ನು ನಮ್ಮ ಸರ್ಕಾರ ಮಾಡಿದೆ. ಜೀವನದಲ್ಲಿ ಒಳ್ಳೆಯ ಆರೋಗ್ಯ ಮುಖ್ಯ ಎಲ್ಲರೂ ಉತ್ತಮ ಆರೋಗ್ಯ ಸಂಪಾದನೆ ಮಾಡಿಕೊಂಡು ಸಮಾಜಸೇವೆ ಮಾಡಬೇಕು ದಾವಣಗೆರೆ ನಗರದಲ್ಲಿನ ಪ್ರತಿಯೊಬ್ಬರಿಗೂ ಸರಳವಾಗಿ ದೊರಕುವ ಸ್ವಾಮೀಜಿ ಎಂದರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿಯಾಗಿದ್ದಾರೆ ಸಮಾರಂಭ ಸಣ್ಣದು ದೊಡ್ಡದು ಎಂಬ ಬೇಧ ತೊರದೆ ಎಲ್ಲಾ ಜನರ ಸಮಾರಂಭಕ್ಕೆ ಹೋಗಿ ಆಶೀರ್ವದಿಸಿ ಬರುವ ಏಕೈಕ ಗುರುಗಳು ಎಂದರು.

ಶಿವನಗೌಡ ಟಿ.ಪಾಟೀಲ ಮಾತನಾಡಿ ನಮ್ಮ ವಿಶ್ವಗುರು ಬಸವ ಸೇನೆಯಿಂದ ಮೊದಲ ಸಾಮಾಜಿಕ ಕಾರ್ಯಕ್ರಮವನ್ನು ಬಸವ ಜಯಂತಿ ಪ್ರಾರಂಭಿಸಿದ ಸ್ಥಳ ವಿರಕ್ತಮಠದಲ್ಲಿ ನಾವು ಮಾಡುತ್ತಿದ್ದೇವೆ .ಬರುವ ದಿನಗಳಲ್ಲಿ ಇನ್ನೂ ಸಮಾಜಮುಖಿ ಕಾರ್ಯಗಳನ್ನು ಬಸವಪ್ರಭು ಸ್ವಾಮೀಜಿ ನೇತೃತ್ವದಲ್ಲಿ ಹಮ್ಮಿಕೊಂಡು ಸಮಾಜಸೇವೆ ಮಾಡುತ್ತೇವೆ ಎಂದರು..

ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾದ ಜಿಲ್ಲಾ ಅದ್ಯಕ್ಷರು ಬಿ.ಜೆ.ಪಿ. ಮುಖಂಡರಾದ ದೇವರಮನಿ ಶಿವಕುಮಾರ್, ಎ.ಪಿ.ಎಂ.ಸಿ.ಅಧ್ಯಕ್ಷರಾದ ಎಸ್.ಕೆ.ಚಂದ್ರಣ್ಣ,ರಿದ್ದಿ ಸಿದ್ದಿ ಫೌಂಡೇಶನ್ ಅದ್ಯಕ್ಷರಾದ ರಾಜು ಭಂಡಾರಿ,ಮಹಾನಗರ ಪಾಲಿಕೆ ಸದಸ್ಯರಾದ ಎಚ್.ಸಿ.ಜಯಮ್ಮ, ಎಸ್.ಬಿ.ರುದ್ರೇಗೌಡ್ರು, ಬಸವ ಸೇನೆ ರಾಜ್ಯ ಕಾರ್ಯದರ್ಶಿಗಳಾದ ಶ್ರೀಕಾಂತ್ ನಿಲಗುಂದ,
ರಾಜ್ಯ ಖಜಾಂಚಿ ಅಭಿಷೇಕ್ ಪಿ,
ರಾಜ್ಯಸಂಚಾಲಕರಾದ ಅಣಜಿ ಪ್ರಶಾಂತ್,ಶಿವಾನಂದ ಬೆನ್ನುರ,ಟಿಂಕರ್ ಮಂಜಣ್ಣ,ಜಯಪ್ರಕಾಶ್ ಮಾಗಿ,ಸೋಗಿ ಗುರು,ಪುಷ್ಪ ವಾಲಿ,ಮಂಗಳ, ಭರತೇಶ್, ಆರೋಗ್ಯ ಕೇಂದ್ರ ಸಿಬ್ಬಂದಿ ಸವಿತಾ ಎಚ್.ಜಿ, ರೇಖಾ,ಹುಲಿಗೆಮ್ಮ,ಸವಿತಾ ಬಿ,ಸಾರ್ವಜನಿಕರು ಉಪಸ್ಥಿತಿರಿದ್ದರು

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!