ದಬ್ಬಾಳಿಕೆಗೆ ಮಣಿಯದೆ ವಿಶ್ವಾಸಕ್ಕೆ ನೀಡಿ ಮತ! ಪ್ರಭಾ ಎಸ್.ಎಸ್ ಮಲ್ಲಿಕಾರ್ಜುನ್
ದಾವಣಗೆರೆ : ಈಗಿನ ಸರ್ಕಾರ ಎಲ್ಲಾ ವಸ್ತುಗಳ ದರ ಹೆಚ್ಚಿಸಿ ಜನ ಸಾಮಾನ್ಯರನ್ನು ಸಂಕಷ್ಠಕ್ಕೆ ನೂಕುತ್ತಿರುವುದು ಎಲ್ಲರಿಗೂ ಗೊತ್ತಿದೆ. ಇಂತಹ ಸರ್ಕಾರಕ್ಕೆ ತಕ್ಕ ಪಾಠ ಕಲಿಸುವ ಸೂಕ್ತ ಸಮಯ ಇದಾಗಿದ್ದು, ಎಸ್.ಎಸ್ ಮಲ್ಲಿಕಾರ್ಜುನ್ ಅವರ ಅಭಿವೃದ್ದಿ ಕಾರ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿಶ್ವಾಸಕ್ಕೆ ಮತ ನೀಡಬೇಕೆಂದು ಪ್ರಭಾಮಲ್ಲಿಕಾರ್ಜುನ್ ಮತದಾರರಲ್ಲಿ ಮನವಿ ಮಾಡಿದರು.
ಇಂದು ಮಹಾನಗರ ಪಾಲಿಕೆ ಉಪಚುನಾವಣೆ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚಿಸಿದ ಅವರು, ಎಸ್.ಎಸ್ ಮಲ್ಲಿಕಾರ್ಜುನ್ ಅವರು ದಾವಣಗೆರೆಯಲ್ಲಿ ಅನೇಕ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಾರೆ. ಕೆರೆ ಅಭಿವೃದ್ದಿ, ರಸ್ತೆ ನಿರ್ಮಾಣ, ಗ್ಲಾಸ್‌ಹೌಸ್ ನಿರ್ಮಾಣ, ಆಶ್ರಯ ಮನೆ ನಿರ್ಮಾಣದಂತಹ ಹಲವು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಬೇಕೆಂದು ವಿನಂತಿಸಿಕೊ0ಡರು.
ಕಾ0ಗ್ರೆಸ್ ಪಕ್ಷದ ಅಭ್ಯರ್ಥಿಗಳಾದ ರೇಖಾರಾಣಿ ಮತ್ತು ಹುಲ್ಮನಿ ಗಣೇಶ್ ಇವರು ಹೊಸ ಅಭ್ಯರ್ಥಿಗಳಾಗಿದ್ದರು ಅವರ ಕಾರ್ಯ ವೈಖರಿಯಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ದಬ್ಬಾಳಿಕೆ ತಂತ್ರಕ್ಕೆ ಮಣಿಯದೆ ವಿಶ್ವಾಸಕ್ಕೆ ಮತ ನೀಡಿ ಎಂದರು. ಮೇ. 20ರಂದು ಮಹಾನಗರ ಪಾಲಿಕೆ ಚುನಾವಣೆ ನಡೆಯಲಿದ್ದು, ಇಂದು ಬೆಳಗ್ಗೆ 8-30ಕ್ಕೆ ನಗರದ 17ನೇ ಕ್ರಾಸಿನಲ್ಲಿರುವ ಶ್ರೀ ಬನ್ನಿ ಮಹಾಂಕಾಳಿ ದೇವಸ್ಥಾನದಿಂದ ಕಾಂಗ್ರೆಸ್ ಮುಖಂಡರಾದ ಪ್ರಭಾ ಎಸ್.ಎಸ್ ಮಲ್ಲಿಕಾರ್ಜುನ್ ಇವರು ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ಆರಂಭಿಸಿದರು.
garudavoice21@gmail.com 9740365719