ದಾವಣಗೆರೆ ದಕ್ಷಿಣದಲ್ಲಿ ಮತದಾನಕ್ಕೆ ಜಮಾಯಿಸಿದ್ದ ಮತದಾರರು

ದಾವಣಗೆರೆ : ಅಲ್ಪಸಂಖ್ಯಾತರೇ ಹೆಚ್ಚಾಗಿದ್ದು, ಅಭ್ಯರ್ಥಿಯ ಆಯ್ಕೆಯಲ್ಲಿ ನಿರ್ಣಾಯಕರೂ ಆಗಿರುವ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರು ಭರ್ಜರಿಯಾಗಿಯೇ ಓಟ್ ಮಾಡಿದ್ದಾರೆ.
ಮತದಾನ ಕೇಂದ್ರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿ, ಸರದಿಯಲ್ಲಿ ನಿಂತು ಮತ ಚಲಾಯಿಸಿದ್ದಾರೆ.
ದಾವಣಗೆರೆ ಎಸ್ ಎಸ್.ಎಂ.ನಗರದಲ್ಲೂ ಜನರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿ ಓಟ್ ಮಾಡಿದ್ದಾರೆ. ಈ ಸಂಖ್ಯೆ ಇದೀಗ ಬಿಜೆಪಿ ಪಾಳೆಯಲ್ಲಿ ನಡುಕ ಹುಟ್ಟಿಸಿದೆ ಎನ್ನಬಹುದು.