ಸುವರ್ಣ ಕರ್ನಾಟಕ ವೇದಿಕೆ ವತಿಯಿಂದ ಮತದಾನ ಜಾಗೃತಿ

ದಾವಣಗೆರೆ; ನಗರದ ನಿಟ್ಟುವಳ್ಳಿ ರಸ್ತೆಯಲ್ಲಿರುವ ಸುವರ್ಣ ಕರ್ನಾಟಕ ವೇದಿಕೆಯ ಕಚೇರಿ ಮುಂಭಾಗದಲ್ಲಿ ನೆನ್ನೆ ಸಂಜೆ ಮತದಾನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮತದಾನ ನಮ್ಮ ಹಕ್ಕು ದೇಶದ ಪ್ರತಿಯೊಬ್ಬ ಪ್ರಜೆ ಮತದಾನದಲ್ಲಿ ಪಾಲ್ಗೊಂಡು ಮತದಾನ ಮಾಡುವ ಮೂಲಕ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕೆಂದು ವೇದಿಕೆ ಅಧ್ಯಕ್ಷ ಸಂಸ್ಥಾಪಕ ರಾಜ್ಯಾದ್ಯಕ್ಷರಾದ ಸಂತೋಷ್ ಕುಮಾರ್ ಅವರು ಮಾತನಾಡಿದರು ಹಾಗೂ ಈ ಕಾರ್ಯಕ್ರಮದಲ್ಲಿ ಗುಬ್ಬಿ ಬಸವರಾಜ್ ಕಲ್ಪತರು ಟ್ರಸ್ಟ್ ಕಾರ್ಯದರ್ಶಿಯಾದ ಕುಮಾರ್ ಭೈರಪ್ಪ ಅಂತರಾಷ್ಟ್ರೀಯ ಯೋಗ ಪಟು ಎನ್ ಪರಶುರಾಮ್ ಶಾಂತಕುಮಾರ್ ದೊಡ್ಮನಿ ಇನ್ನು ಅನೇಕ ಕಾರ್ಯಕರ್ತರ ಭಾಗವಹಿಸಿದ್ದರು.