ನೋಡುಗರ ಕಣ್ಮನ ಸೆಳೆದ ಕೋಡಿ ಬಿದ್ದು ಹರಿಯುವ ನೀರಿನ ದೃಶ್ಯ

ದಾವಣಗೆರೆ : ಜಿಲ್ಲೆಯ ಚನ್ನಗಿರಿ ತಾಲೂಕಿನ ಕಂಚುಗಾರನಹಳ್ಳಿ ಗ್ರಾಮದ ಕೆರೆ ಕೋಡಿ ಬಿದ್ದು ಹರಿಯುತ್ತಿರುವ ದೃಶ್ಯ ಕಣ್ಮನ ಸೆಳೆಯುತ್ತಿದೆ.

ಸುಮಾರು ಒಂದು ತಿಂಗಳ ಹಿಂದೆ ಈ ಕೆರೆ ತುಂಬಿ ಕೂಡಿ ಬಿದ್ದಿದ್ದು, ಮೊನ್ನೆ ರಾತ್ರಿ ಮತ್ತೆ ಸುರಿದ ಭಾರಿ ಮಳೆಗೆ ಕೆರೆಯ ಕೋಡಿಯಿಂದ ನದಿಯ ರೀತಿಯಲ್ಲಿ ನೀರು ಹೊರ ಹೋಗುತ್ತಿರುವ ಅದ್ಭುತವಾದ ಮನಮೋಹಕ ದೃಶ್ಯ ನೋಡುಗರ ಕಣ್ಣಿಗೆ ತಂಪೆರೆಯತ್ತಿದೆ.