ಬಿ ಎಸ್ ವೈ ಬೆನ್ನಿಗೆ ಚಾಕು ಹಾಕಲು ಬಂದರೆ ನಾವು ಬಿಡ್ತೀವಾ: ಸಿಪಿ ಯೋಗೀಶ್ವರ್ ವಿರುದ್ಧ ಕೆಂಡಕಾರಿದ ರೇಣುಕಾಚಾರ್ಯ
ದಾವಣಗೆರೆ :ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸದ್ಯದ ಪರಿಸ್ಥಿತಿಯ ‘ಉಂಡು ಹೋದ ಕೊಂಡು ಹೋದ’ ಎಂಬಂತಾಗಿದೆ. ಮೆಗಾಸಿಟಿ ಹಗರಣದಲ್ಲಿ ಪಾಲುದಾರನಾಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಆತ ಮೂಲತಃ ಬಿಜೆಪಿಗಲ್ಲ ಕಾಂಗ್ರೆಸ್ ನಿಂದ ಬಿಜೆಪಿಗೆ ಬಂದವರು. ಮೊದಲು ಬಿಜೆಪಿಯಲ್ಲಿದ್ದಾಗ ಅರಣ್ಯ ಇಲಾಖೆ ಸಚಿವನಾಗಿ ಲೂಟಿ ಹೊಡೆದಿದ್ದಾನೆ ನಂತರ ಕಾಂಗ್ರೆಸ್ ಸೇರಿದರು ಸೈಕಲ್ ಹತ್ತಿದ್ರು ಬಿಜೆಪಿಗೆ ಬಂದರು ಎಂದು ಸಿಪಿ ಯೋಗೀಶ್ವರ್ ವಿರುದ್ಧ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಹರಿಹಾಯ್ದರು.
ರಾಮನಗರ ಜಿಲ್ಲೆಯ ಸುತ್ತಮುತ್ತ ಬಿಜೆಪಿಯಿಂದ 18 ಜನರಿಗೆ ಬಿ ಫಾರಂ ಕೊಡಿಸಿದರು ಅವರನ್ನು ಗೆಲ್ಲಿಸಿಕೊಂಡು ಬರುವುದಿರಲಿ ತಾವು ಸಹ ಚುನಾವಣೆಯಲ್ಲಿ ಗೆಲ್ಲಲಿಲ್ಲ ಎಂದು ಲೇವಡಿ ಮಾಡಿದ್ದಾರೆ. ರಮೇಶ್ ಜಾರಕಿಹೊಳಿ ಸ್ವಯಂಪ್ರೇರಣೆಯಿಂದ ಬಿಜೆಪಿಗೆ ಬಂದಿದ್ದಾರೆ ಅದರಲ್ಲಿ ಸಿಪಿಯೋಗೇಶ್ವರ್ ಅವರದ್ದು ಯಾವುದೇ ಪಾತ್ರವಿಲ್ಲ ಎಂದರು. ತಮ್ಮ ಹೆಸರಲ್ಲಿ ಮೂರು ಡಿನ್ ( ಡೈರೆಕ್ಟರ್ ಐಡೆಂಟಿಫಿಕೇಷನ್ ನಂಬರ್) ನಂಬರ್ ಹೊಂದಿದ್ದಾನೆ ಆದರೆ ಇದು ಒಬ್ಬರಿಗೆ ಒಂದೇ ಇರುತ್ತದೆ ಎಂದು ಮಾಹಿತಿ ನೀಡಿದರು.
ಅವನೊಬ್ಬ ಫ್ರಾಡ್ ದೊಡ್ಡ ಹಗರಣ ಮಾಡಿದ್ದಾನೆ ಅವನು ಐರನ್ ಲೆಗ್ ಮನುಷ್ಯ ಎಂದು ವಾಗ್ದಾಳಿ ನಡೆಸಿದರು. ಚುನಾವಣೆಯಲ್ಲಿ ಸೋತರು ಅವರನ್ನು ಎಂಎಲ್ಸಿ ಮಾಡಿ ಸಚಿವರನ್ನಾಗಿ ಮಾಡಿದ್ರೂ ಆದರೂ ಸಹ ಸಿಎಂ ವಿರುದ್ಧವೇ ಊಹಾಪೋಹ ಹರಡುತ್ತಿದ್ದಾರೆ ಸಿಎಂ ಬದಲಾವಣೆಯ ಪುಕಾರು ಹಬ್ಬಿಸುತ್ತಿದ್ದಾರೆ. ಸಂಘಟನೆಗೆ ಸಿಪಿವೈ ಕೊಡುಗೆ ಶೂನ್ಯ ಎಲ್ಲೆಡೆ ಸೋತು ಸುಣ್ಣವಾಗಿದ್ದಾನೆ ಇವನೊಬ್ಬ 420 ಸಚಿವರನ್ನಾಗಿ ಮಾಡಬೇಡಿ ಎಂದು ನಾವು ಮೊದಲೇ ಹೇಳಿದ್ವಿ ಆದರೆ ಸಚಿವರನ್ನಾಗಿ ಮಾಡಿದ್ದೆ ತಪ್ಪಾಯ್ತು ಎಂದು ಬೇಸರ ವ್ಯಕ್ತಪಡಿಸಿದರು. ಸಿಎಂ ವಿರುದ್ಧ ದೂರು ಹೇಳಲು ದೆಹಲಿಗೆ ಹೋದ ಸಿಪಿವೈಗೆ ರಾಷ್ಟ್ರೀಯ ನಾಯಕರು ಮಂಗಳಾರತಿ ಎತ್ತಿ ಕಳುಹಿಸಿದ್ದಾರೆ ಎಂದರು.
ರಾಮನಗರದ ಉಸ್ತುವಾರಿ ಸಚಿವನಾಗುವ ಆಸೆ ಇಟ್ಟುಕೊಂಡಿದ್ದಾರೆ ಬೃಹತ್ ನೀರಾವರಿ ಹಾಗೂ ಇಂಧನ ಖಾತೆ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಲು 65 ಶಾಸಕರು ಸಹಿ ಮಾಡಿಕೊಟ್ಟಿದ್ದಾರೆ ಅವನು ಮಾಡಿದ ಹಗರಣಗಳ ದಾಖಲೆ ನಮ್ಮ ಬಳಿ ಇದೆ ಎಂದು ಬಹಿರಂಗವಾಗಿ ಮಾಹಿತಿ ನೀಡಿದರು. ಅವನ ವಿರುದ್ಧ ಕ್ರಮಕ್ಕೆ ಸಿಎಂ ಯಡಿಯೂರಪ್ಪ ಅವರಿಗೆ ಆಗ್ರಹಿಸಿದ್ದೇವೆ.ಕೇಂದ್ರದಲ್ಲಿ ಸಿಎಂ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ ಕೋವಿಡ್ ಸಂಕಷ್ಟದಲ್ಲಿ ಸಿಎಂ ಯಡಿಯೂರಪ್ಪ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ ಇವರ ಕಾರ್ಯವೈಖರಿ ಕಂಡು ಕೇಂದ್ರ ಸರ್ಕಾರ ಬೆಂಬಲ ಸೂಚಿಸಿ ಅನುದಾನ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಯಡಿಯೂರಪ್ಪ ಹೋರಾಟದಿಂದ ಮುನ್ನಲೆಗೆ ಬಂದ ಮಹಾನ್ ನಾಯಕ ಎಂದು ಬಣ್ಣಿಸಿದರು.
ಬಿ ಎಸ್ ವೈ ಬೆನ್ನಿಗೆ ಚಾಕು ಹಾಕಲು ಬಂದರೆ ನಾವು ಬಿಡ್ತೀವಾ ಕೆಲಸ ಮಾಡಪ್ಪ ಎಂದರೆ ಸ್ವಾರ್ಥಕ್ಕಾಗಿ ಹೋಮ-ಹವನ ಮಾಡುತ್ತಿದ್ದಾರೆ. ಯತ್ನಾಳ್ ಅವರು ಬಿಎಸ್ವೈ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಿಲ್ಲ ಎಂದು ಎಚ್ಚರಿಸಿದರು. ಸಿಎಂ ಸಮರ್ಥವಾಗಿದ್ದಾರೆ ಲಾಕ್ಡೌನ್ನಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ.ಕೋವಿಡ್ ಮುಗಿದಮೇಲೆ ನಾವೇನು ಅನ್ನೋದು ತೋರಿಸುತ್ತೇವೆ ಎಂದು ಸಿಪಿ ಯೋಗೇಶ್ವರ್ ಗೆ ಟಾಂಗ್ ನೀಡಿದರು.