ಮಾಸ್ಕ್ ಹಾಕಿಕೋ ಅಂದ್ರೆ ಅಧಿಕಾರಿಗಳ ಮೇಲೆ ರೇಗಿದ್ದ ವ್ಯಕ್ತಿ ಪೊಲಿಸ್ ವಶಕ್ಕೆ

ದಾವಣಗೆರೆ:ಮಾಸ್ಕ್ ಹಾಕು ಎಂದಿದ್ದಕ್ಕೆ ತಹಶಿಲ್ದಾರ್ ಮೇಲೆ ರೇಗಾಡಿದ ವ್ಯಕ್ತಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ,ದಾವಣಗೆರೆಯ ಕಾಳಿಕಾದೇವಿ ರಸ್ತೆಯಲ್ಲಿ ಇಂದು ಘಟನೆ ನಡೆದಿದ್ದು, ಮಾಸ್ಕ್ ಜಾಗೃತಿ ಹಾಗೂ ಅಂಗಡಿಗಳನ್ನು ಮುಚ್ಚಿಸುತ್ತಿದ್ದ ತಹಶಿಲ್ದಾರ್ ಗಿರೀಶ್ ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಬುದ್ದಿ ಮಾತು ಹೇಳಿದ್ದಕ್ಕೆ ತಹಶಿಲ್ದಾರ್ ಹಾಗೂ ಪೊಲೀಸರ ಮೇಲೆಯೇ ಎಗರಾಡಿದ. ಆ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ಗಾಂಧಿನಗರ ಠಾಣೆಗೆ ಕರೆದುಕೊಂಡು ಹೊಗಲಾಯಿತು.
ತಹಸೀಲ್ದಾರ್ ಹಾಗೂ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ವ್ಯಕ್ತಿ