ಬಾವಿ ಶಿಕ್ಷಕರಾಗುವ ತಮ್ಮ ಮೇಲೆ ತುಂಬಾ ಜವಾಬ್ದಾರಿಯುತ ಹೊಣೆಗಾರಿಕೆ ಇದೆ ಬಿ ಇ ಒ ಎಂ ಬಿ ಪಾಟೀಲ

ಹಾವೇರಿ : ಬಾವಿ ಶಿಕ್ಷಕರಾಗುವ ತಮ್ಮ ಮೇಲೆ ತುಂಬಾ ಜವಾಬ್ದಾರಿಯುತ ಹೊಣೆಗಾರಿಕೆ ಇದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ ಬಿ ಪಾಟೀಲ ಹೇಳಿದರು.

ಇಲ್ಲಿನ ಇಜಾರಿ ಲಕಮಾಪುರದಲ್ಲಿನ ಟಿಎಂಎಇಎಸ್ ಮಹಾವಿದ್ಯಾಲಯದಲ್ಲಿ ದ್ವಿತೀಯ ಬಿ ಇಡಿ ಪ್ರಶಿಕ್ಷಾರ್ಥಿಗಳ ಬಿಳ್ಕೊಡಗೆ ಹಾಗೂ ದೀಪದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಶಿಕ್ಷಕರಿಗೆ ಗೌರವಯುತ ಸ್ಥಾನಮಾನವಿದೆ. ದೇಶ ಕಟ್ಟುವ ಕೆಲಸ ಮಾಡುವ ಕಾಯಕ ನಿಮ್ಮದಾಗಿದೆ. ಉತ್ತಮ ಸಮಾಜಕ್ಕಾಗಿ ತಮ್ಮ ಸೇವೆ ನಿರಂತರವಾಗಿರಲಿ ಎಂದರು.

ಹಿರಿಯ ಉಪನ್ಯಾಸಕರಾದ ಐ ಆರ್ ಹರವಿ ಮಾತನಾಡಿ ಶಿಕ್ಷಕರು ಮನಸ್ಸು ಮಾಡಿದರೆ ಏನೆಲ್ಲಾ ಸಾಧಕರನ್ನು ಸೃಷ್ಟಿಸಬಹುದು. ಸಮಾಜದಲ್ಲಿ ಸಾರ್ಥಕ ಬದುಕು ಶಿಕ್ಷಕರ ವೃತ್ತಿಯಲ್ಲಿ ಇದೆ. ತಾವುಗಳು ಹೊಣೆಗಾರಿಕೆಯಿಂದ ಇರುವುದು ಅಗತ್ಯವಾಗಿದೆ. ಶಿಕ್ಷಕರು ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣದ ಪ್ರತಿರೂಪವಾಗಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಕಾಯಕ ಮಾಡುವುದು ಪುಣ್ಯದ ಕೆಲಸ ಎಂದು ಐ ಆರ್ ಹರವಿ ಹೇಳಿದರು.

ಇದೇ ಸಮಯದಲ್ಲಿ ದಿ.ಪುನೀತ ರಾಜಕುಮಾರ ಅವರ ಸವಿನೆನಪಿಗಾಗಿ ಪರಿಸರ ಉಳಿಸಿ ಬೆಳಿಸಿ ಎಂಬ ಉದ್ದೇಶದಿಂದ ಪ್ರತಿಯೊಬ್ಬ ಬಾವಿ ಶಿಕ್ಷಕರಿಗೆ ಸಸಿ ನೀಡುವ ಮೂಲಕ ಪರಿಸರ ಸ್ನೇಹಿ ಕಾರ್ಯಕ್ರಮವಾಯಿತು. ಈ ಸಂದರ್ಭದಲ್ಲಿ ಪ್ರಾಚಾರ್ಯರಾದ
ಡಾ.ಬಸನಗೌಡ ಬಿ ಎಂ ಅವರು ಅಧ್ಯಕ್ಷತೆವಹಿಸಿದ್ದರು.ಬಿ ಪಿ ಇಡಿ ಕಾಲೇಜು ಪ್ರಾಚಾರ್ಯರಾದ ಸಿ ಜಿ ಪೂಜಾರ. ಉಪನ್ಯಾಸಕರಾದ ಶಂಕರಗೌಡ ತರಗನಹಳ್ಳಿ. ಲೋಕೇಶ ಸಿಡಕನಹಾಳ ದೇವರಾಜ ಕುಂಬಾರ. ಕಾಲೇಜು ಕಾರ್ಯವೃಂದದವರು ಹಾಗೂ
ಬಿ ಎಡ್ ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!