Well furnished School : ದೇಗುಲ ಕಟ್ಟುವ ಒಗ್ಗಟ್ಟಿನಂತೆ ಸುಸಜ್ಜಿತ ಶಾಲೆಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ಅಗತ್ಯ: ಜಿ. ಬಿ. ವಿನಯ್ ಕುಮಾರ್ 

Well furnished School : More emphasis needed on construction of well furnished schools as well as temple building: G. b. Vinay Kumar

filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: portrait;hw-remosaic: false;touch: (-1.0, -1.0);sceneMode: 7864320;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 39;

ದಾವಣಗೆರೆ:Well furnished School :  ದೇವಸ್ಥಾನ ಕಟ್ಟಲು ತೋರುವ ಒಗ್ಗಟ್ಟು ಸುಸಜ್ಜಿತ ಶಾಲೆ ನಿರ್ಮಾಣ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡಿದರೆ ರಾಜ್ಯದಲ್ಲಿ ಮಾದರಿ ಶಾಲೆಯನ್ನಾಗಿಸಲು ಸಾಧ್ಯ ಎಂದು ಇನ್ ಸೈಟ್ಸ್ ಐಎಎಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕರೂ ಆದ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಅಭಿಮತ ವ್ಯಕ್ತಪಡಿಸಿದರು.

ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಗಡಿಮಾಕುಂಟೆ ಗ್ರಾಮದಲ್ಲಿ ಶ್ರೀಮದ್‌ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ 1008 ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ನಡೆದ ಶ್ರೀ ಬಸವೇಶ್ವರಸ್ವಾಮಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಹಾಗೂ ಅಡ್ಡಪಲ್ಲಕ್ಕಿ ಮಹೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ರಾಜ್ಯ ಪ್ರತಿಯೊಂದು ಗ್ರಾಮಗಳಲ್ಲಿಯೂ ದೇವಸ್ಥಾನ ಕಟ್ಟಲು ವಿಶೇಷ ಆಸಕ್ತಿ, ಒಗ್ಗಟ್ಟು, ಶಕ್ತಿ, ಶ್ರಮ ವಹಿಸುತ್ತಾರೆ. ಜಾತಿ ಬೇಧ ಮರೆತು ಎಲ್ಲರೂ ಒಂದಾಗಿ ದೇವಸ್ಥಾನ ಕಟ್ಟಬೇಕು ಎಂಬ ಅಪೇಕ್ಷೆ ಒಳ್ಳೆಯದು. ದೇವಸ್ಥಾನ ಕಟ್ಟಿದ ಮೇಲೆ ಮುಂದಿನ ದಿನಗಳಲ್ಲಿಯೂ ಗ್ರಾಮದ ಜನರಲ್ಲಿ ಅದೇ ಉತ್ಸಾಹ, ಪ್ರೀತಿ, ಒಗ್ಗಟ್ಟು, ಶಕ್ತಿ ಇರಬೇಕು. ಅದೇ ರೀತಿಯಲ್ಲಿ ದೇಗುಲನ ನಿರ್ಮಾಣಕ್ಕೆ ತೋರುವ ಒಗ್ಗಟ್ಟು, ಪರಿಶ್ರಮ, ಆಸಕ್ತಿ ಸುಸಸ್ಜಿತ ಶಾಲೆ ಹಾಗೂ ಸರ್ಕಾರಿ ಶಾಲೆಗಳ ಗುಣಮಟ್ಟದತ್ತ ಯೋಚಿಸಬೇಕಾದ ಅಗತ್ಯತೆ ಇದೆ ಎಂದು ಪ್ರತಿಪಾದಿಸಿದರು.

ಸರ್ಕಾರಿ ಶಾಲೆಗಳಲ್ಲಿ ಓದಿ ಬರುವ ವಿದ್ಯಾರ್ಥಿಗಳಿಗೆ ಐಎಎಸ್, ಐಪಿಎಸ್ ಕಷ್ಟವಾಗುತ್ತಿದೆ. ಇದಕ್ಕೆ ಕಾರಣ ಉತ್ಕೃಷ್ಟ ಗುಣಮಟ್ಟದ ಶಿಕ್ಷಣ ಸಿಗದಿರುವುದು ಹಾಗೂ ಅಸಮಾನತೆ ಇರುವುದೇ ಕಾರಣವಾಗಿದೆ. ಹಾಗಾಗಿ, ದೇವಸ್ಥಾನ ಕಟ್ಟುವಷ್ಟೇ ಆಸಕ್ತಿ ಉತ್ಸಾಹ ಶಾಲೆಗಳ ಅಭಿವೃದ್ಧಿಗೂ ಬೇಕು. ನಮ್ಮ ಸಂಸ್ಥೆಯಲ್ಲಿ ಓದಿದ ಬಡ ಮತ್ತು ಶ್ರೀಮಂತ ಮಕ್ಕಳು ಐಎಎಸ್, ಐಪಿಎಸ್ ಅಧಿಕಾರಿಗಳಾಗಿದ್ದಾರೆ. ಸರ್ಕಾರಿ ಶಾಲೆಗಳ ಮಕ್ಕಳಿಗೆ ನಗರ ಪ್ರದೇಶದ ಮಕ್ಕಳಂತೆ ಶಿಕ್ಷಣ ಸಿಕ್ಕರೆ ಸಾಧನೆ ಕಷ್ಟವಾಗದು. ದೇವಸ್ಥಾನ ನಿರ್ಮಾಣದಂತೆ ಶಾಲೆಗಳ ನಿರ್ಮಾಣವೂ ಆಗಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಯೋಚಿಸಬೇಕಿದೆ. ಆದ್ರೆ, ಗಟ್ಟಿ ಮನಸ್ಸು ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಧರ್ಮ ಮತ್ತು ಸಂಸ್ಕೃತಿ ಉಳಿಯಬೇಕು. ಜೊತೆಗೆ ಶಿಕ್ಷಣಕ್ಕೂ ಹೆಚ್ಚಿನ ಮಹತ್ವ ನೀಡಬೇಕಿದೆ. ಶಿಕ್ಷಣದ ಮೂಲಕ ಧರ್ಮ ಮತ್ತು ಸಂಸ್ಕೃತಿ ಅರಿವು ಮಕ್ಕಳಲ್ಲಿ ಮೂಡಿಸಬೇಕಾದ ಅಗತ್ಯತೆ ಇದೆ. ಧರ್ಮದಂತೆ ನಡೆದರೆ ಸಂಸ್ಕೃತಿ ಬೆಳೆಸಿಕೊಂಡರೆ ಸಹಬಾಳ್ವೆ ಸಾಧ್ಯವಾಗುತ್ತದೆ. ಈ ಗ್ರಾಮದಲ್ಲಿನ ಮಕ್ಕಳು ಐಎಎಸ್, ಐಪಿಎಸ್ ಆಗುವಂತೆ ಭಗವಂತ ಶಕ್ತಿ ನೀಡಲಿ ಎಂದು ಹಾರೈಸಿದರು.

ಕೊಟ್ಟೂರು ಚಾನೂಕೊಟಿ ಮಠದ ಷ.ಬ್ರ. ಶ್ರೀ ಡಾ. ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಜಗಳೂರು ಶಾಸಕ ಬಿ. ದೇವೇಂದ್ರಪ್ಪ ರವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕೇಂದ್ರದ ಮಾಜಿ ಸಚಿವ ಹಾಗೂ ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ, ಮಾಜಿ ಶಾಸಕರಾದ ಎಸ್. ವಿ. ರಾಮಚಂದ್ರಪ್ಪ, ಹೆಚ್. ಪಿ. ರಾಜೇಶ್, ಕೆ. ತಿಪ್ಪೇಸ್ವಾಮಿ. ಹೊಸಪೇಟೆ  ಅಜ್ಜಯ್ಯ ನಾಡಗೇರ, ಹೆಚ್. ನಾಗರಾಜ, ಬಿಸ್ತುವಳ್ಳಿ ಬಾಬಣ್ಣ, ಗ್ರಾ. ಸದಸ್ಯರಾದ ಬೋರಮ್ಮ, ಜೆ. ಎಂ. ತಿಪ್ಪೇಸ್ವಾಮಿ, ಕೆ. ಪಿ. ಪಾಲಯ್ಯ, ಎಸ್.ಕೆ. ಮಂಜುನಾಥ, ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಪಲ್ಲಗಟ್ಟೆ ಮಹೇಶ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸೊಕ್ಕೆ ನಾಗರಾಜ್ ಹಲವರು ಮುಖಂಡರು ಉಪಸ್ಥಿತರಿದ್ದರು.

ವೈಮನಸ್ಸು ದೂರವಾಗಿಸುವ ತಾಣ: ಜಿಬಿವಿ

ದೇವಸ್ಥಾನ ಸಾಂಸ್ಕೃತಿಕ ಹಾಗೂ ಶಕ್ತಿ ಕೇಂದ್ರ. ಊರಲ್ಲಿರುವ ವೈಮನಸ್ಸು, ಬಿರುಕು ದೂರ ಮಾಡಿ ಒಂದು ಮಾಡುವ ಶಕ್ತಿ ಈ ಪವಿತ್ರ ತಾಣಕ್ಕಿದೆ. ನಮ್ಮೆಲ್ಲರ ಭಿನ್ನಾಭಿಪ್ರಾಯ ತೊಲಗಿಸಿ ಒಂದಾಗಿಸುವ ಶ್ರದ್ಧಾ ಭಕ್ತಿಯ ಸ್ಥಳ. ನಾನು ಕಳೆದ ಲೋಕಸಭೆ ಚುನಾವಣೆ ವೇಳೆ ಈ ಗ್ರಾಮಕ್ಕೆ ಬಂದಿದ್ದೆ. ಎಷ್ಟೇ ಕಾರ್ಯಕ್ರಮಗಳಿದ್ದರೂ ಜನರ ಪ್ರೀತಿಗೆ ಮಣಿದು ಬಂದಿರುವೆ. ರಾಜ್ಯದ ಸುತ್ತ ಪ್ರಯಾಣ ಮಾಡುತ್ತಿದ್ದೇನೆ. ನಿಮ್ಮೆಲ್ಲರ ಆರೈಕೆ, ಆಶೀರ್ವಾದ ನಮ್ಮಂಥವರ ಮೇಲೆ ಇರಲಿ ಎಂದು ಮನವಿ ಮಾಡಿದರು.

ಇತ್ತೀಚಿನ ಸುದ್ದಿಗಳು

error: Content is protected !!