ಮನೆಯಲ್ಲಿ ಧರ್ಮಾಚರಣೆ ಇರಲಿ, ಸಮಾಜದಲ್ಲಿ ಸರ್ಕಾರದ ಆದೇಶ ಪಾಲಿಸಿ ಧರ್ಮದಲ್ಲಿ ರಾಜಕೀಯ ಬೆರೆಸಬೇಡಿ : ಓಂಕಾರ ಶಿವಾಚಾರ್ಯ ಸ್ವಾಮೀಜಿ

ದಾವಣಗೆರೆ: ಧರ್ಮದಲ್ಲಿ ರಾಜಕೀಯ ಬೆರೆಸಬಾರದು ಇದರಿಂದ ಸಮಾಜಕ್ಕೆ ಧಕ್ಕೆಯಾಗುತ್ತದೆ ಎಂದು ಆವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ನಗರದ ಹುಬ್ಬಳ್ಳಿ ಚೌಡಪ್ಪನ ಗಲ್ಲಿಯಲ್ಲಿರುವ ಶ್ರೀ ವೀರಭದ್ರೇಶ್ವರ ಸ್ವಾಮಿ ಶಿವಮೂರ್ತಿಯ 22ನೇ ವರ್ಷದ ವಾರ್ಷಿಕ ಮಹೋತ್ಸವ ಹಾಗೂ ಧರ್ಮಾಧಿಕಾರಿ ಲಿಂ|| ಶ್ರೀಮತಿ ಗುರುಬಾಯಮ್ಮನವರ 7ನೇ ವರ್ಷದ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡುತ್ತ ಅವರು ಮಾತನಾಡಿದರು.

ದೇವರ ಹೆಸರಿನಲ್ಲಿ ಮುಖವಾಡ ಹಾಕಿಕೊಂಡು ಹಣಮಾಡುವವರನ್ನು ನೋಡಿದ್ದೇವೆ. ಆದರೆ ಇಲ್ಲಿ ನಿಷ್ಕಲ್ಮಶ ಮನಸ್ಸಿನಿಂದ ಭಕ್ತರು ತಮ್ಮ ಕೈಲಾದಷ್ಟು ನಿರಾಪೇಕ್ಷೆಯಿಂದ ತಮ್ಮ ಕೈಲಾದಷ್ಟು ಶ್ರದ್ಧಾ ಭಕ್ತಿಯಿಂದ ಶ್ರೀ ಸ್ವಾಮೀಯ ಆರಾಧಾನೆ ಮೂಲಕ ಸ್ಮರಿಸುತ್ತಿರುವುದು ಶ್ಲಾಘನೀಯ ಎಂದರು.

ಧರ್ಮ ಮಾರ್ಗದಲ್ಲಿ ಮಾನವ ನಡೆಯುವುದರ ಮೂಲಕ ಧರ್ಮದ ಮೌಲ್ಯಗಳನ್ನು ಬೆಳೆಸಿಕೊಂಡು ಧರ್ಮದ ಚೌಕಟ್ಟಿನಲ್ಲಿ ನಡೆದು ಭಗವಂತನಿಗೆ ತಮ್ಮ ಪ್ರಾರ್ಥನೆಯನ್ನು ಸಲ್ಲಿಸಬೇಕೆ ಹೊರತು ಧರ್ಮವನ್ನು ವೈಭವೀಕರಿಸಬಾರದು. ಮಠ, ಮಂದಿರ, ಮಸೀದಿ, ಚರ್ಚ್ ಗಳ ಮೂಲಕ ತಮ್ಮ ಧರ್ಮದ ಆಚರಣೆಯನ್ನು ಮನೆಯಲ್ಲಿಟ್ಟುಕೊಂಡು ಸಂಸ್ಕಾರವAತರಾಗಿ. ಸಾಮಾಜಿಕ ಜೀವನದಲ್ಲಿ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ನಡೆಯಬೇಕು ಎಂದು ತಿಳಿಸಿದರು.

ದಿಷ್ಟರ ಶಿಕ್ಷಕ,ಶಿಷ್ಯರ ರಕ್ಷಕ ಶ್ರೀ ವೀರಭದ್ರೇಶ್ವರ ಸ್ವಾಮಿ ನಿಜವಾದ ಧರ್ಮ ಅಚರಣೆಯ ರಕ್ಷಕ, ಅವರ ಮೌಲ್ಯಗಳು ಜೀವನದಲ್ಲಿ ಅಳವಡಿಸಿಕೊಂಡು ಮನುಷ್ಯ ಜೀವನದಲ್ಲಿ ಯಶಸ್ವಿಯಾಗುತ್ತಾನೆ,ಉಜ್ವಲವಾದ ಭವಿಷ್ಯದಲ್ಲಿ ಒಳ್ಳೆಯ ಫಲಗಳನ್ನು ಪಡೆಯುತ್ತಾರೆ ಎಂದರು.
ಮತ್ತಿಹಳ್ಳಿ ರೈಸ್ ಮಿಲ್ ಮಾಲಿಕ ಮತ್ತಿಹಳ್ಳಿ ಸಂತೋಷ, ಎಪಿಎಂಸಿ ಮಾಜಿ ಸದಸ್ಯ ಎನ್ ಅಡಿವೆಪ್ಪ, ಐಶ್ವರ್ಯ ಟ್ರೇಡರ್ಸ್ ಕೋಟ್ರೇಶ್, ವೀರಪ್ಪ ಬಿಜ್ಜೂರು ಲಿಂಗರಾಜ್ ಹೊಳಿಬಸಯ್ಯ, ಹರಿಹರ ನಗರಸಭೆ ಸಜಾಯಕ ಇಂಜಿನಿಯರ್ ಎಸ್ ಎಸ್ ಬಿರಾದಾರ್, ಶ್ರೀ ವೀರಭದ್ರೇಶ್ವರ ಸ್ವಾಮಿ, ಬೇವಿನ ಹಳ್ಳಿ ಹಾಲೇಶ್, ಕದರಮಂಡಲಗಿ ವೀರಪ್ಪಾಜಿ, ಕರಿಬಸಪ್ಪ ಬಿಜ್ಜೂರ, ಮುಂತಾದವರು ಉಪಸ್ಥಿತರಿದ್ದರು

ಈ ಸಂದರ್ಭದಲ್ಲಿ ಪ್ರಾರ್ಥನೆ ನಂತರ ಪತ್ರಕರ್ತ ವೀರಪ್ಪ ಭಾವಿ ಕಾರ್ಯಕ್ರಮ ನಿರೂಪಣೆ ಮಾಡಿ ಅಂತ್ಯದಲ್ಲಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!