ವೈನ್ ಶಾಪ್ ನಲ್ಲಿ ಬರೊಬ್ಬರಿ 1.47 ಲಕ್ಷ ಮೌಲ್ಯದ ವಿಸ್ಕಿ, ಬೀರ್, ಬ್ರಾಂದಿ ಬಾಟಲ್ ಗಳ ಕಳ್ಳತನ!
ದಾವಣಗೆರೆ: ದೇವಸ್ಥಾನ, ಮನೆ, ಬ್ಯಾಂಕ್‌ಗಳ ದರೋಡೆ ಮಾಡುವ ಕಳ್ಳರೀಗ ವೈನ್ ಶಾಪ್ ಕಳ್ಳತನಕ್ಕೂ ದಾಂಗುಡಿ ಇಟ್ಟಿದ್ದಾರೆ!
ಹೌದು! ಇಂತಹದ್ದೊಂದು ಪ್ತಕರಣವೀಗ ಕೊಂಡಜ್ಜಿ ಗ್ರಾಮದಲ್ಲಿರುವ ಪೂಜಾ ವೈನ್ ಶಾಪ್ ನಲ್ಲಿ ನಡೆದಿದ್ದು, ರಾತ್ರಿವೇಳೆ ವೈನ್ ಶಾಪ್‌ನ ಹಿಂಬದಿಯ ಗೋಡೆ ಒಡೆದು ಹಾಕಿ ಅಲ್ಲಿದ್ದ 25 ಸಾವಿರ ನಗದಿನ ಜತೆಗೆ 1.22 ಲಕ್ಷ ರೂ., ಮೌಲ್ಯದ ವೈನ್, ವಿಸ್ಕಿ, ಬ್ರಾಂದಿ ಬಾಟಲ್‌ಗಳು ದೋಚಿದ್ದಾರೆ.
ಕಳ್ಳರು 1.22 ಲಕ್ಷ ಬೆಲೆಯ ಹೈವಾರ್ಡ್ಸ್ ವಿಸ್ಕಿಯ 36 ಬಾಕ್ಸ್, 500 ಮಿಲಿಯ ಕಿಂಗ್ ಫಿಶರ್ ಟಿನ್ ಬೀರ್‌ನ 02 ಬಾಕ್ಸ್, 330 ಮಿಲಿಯ ಕಿಂಗ್ ಫಿಶರ್ ಟಿನ್ ಬೀರ್ ನ 03 ಬಾಕ್ಸ್ ಜತೆಗೆ 25 ಸಾವಿರ ನಗರದು ಸೇರಿ ಒಟ್ಟು ₹ 1.47 ಲಕ್ಷ ಮೌಲ್ಯದಷ್ಟು ಕಳ್ಳತನ ಮಾಡಿದ್ದಾರೆ.
ಈ ಬಗ್ಗೆ ಹರಿಹರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.