ಮಹಿಳೆಯರಿಗಾಗಿ ಉಚಿತ ಆರೋಗ್ಯ ತಪಾಸಣೆ: ಎಸ್ ಎಸ್ ಕೇರ್ ಟ್ರಸ್ಟ್ ನಿಂದ ಪಾಲಿಕೆ 5 ನೇ ವಾರ್ಡನಲ್ಲಿ ಆಯೋಜನೆ

IMG-20211107-WA0176

ದಾವಣಗೆರೆ: ಎಸ್.ಎಸ್.ಕೇರ್ ಟ್ರಸ್ಟ್ ಹಾಗೂ ಜೆ.ಜೆ.ಎಂ.ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬಾಪೂಜಿ ಆಸ್ಪತ್ರೆ ಹಾಗೂ ಬಾಪೂಜಿ ಡೆಂಟಲ್ ಕಾಲೇಜು, ಕಾಲೇಜು ಆಫ್ ಡೆಂಟಲ್ ಸೈನ್ಸ್ ವತಿಯಿಂದ ಮಹಿಳೆಯರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ದಾವಣಗೆರೆ ಮಹಾನಗರ 5ನೇ ವಾರ್ಡ್‍ನಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿತ್ತು.

ಆರೋಗ್ಯ ತಪಾಸಣಾ ಶಿಬಿರದಲ್ಲಿ ತಪಾಸಣೆ ಭಾಗವಹಿಸಿದ ಮಹಿಳೆಯರು ಮಹಿಳೆಯರು

5ನೇ ವಾರ್ಡ್‍ನ ರಾಜೀವಗಾಂಧಿ ಬಡಾವಣೆಯ ವಿದ್ಯಾಜ್ಯೋತಿ ಕಾನ್ವೆಂಟ್‍ನಲ್ಲಿ ನಡೆದ ಈ ಶಿಬಿರಕ್ಕೆ ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಡಾ|| ಶಾಮನೂರು ಶಿವಶಂಕರಪ್ಪನವರು ಮತ್ತು ನಿರ್ದೇಶಕರಾದ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್ ಅವರು ಚಾಲನೆ ನೀಡಿದರು.

ಶಿಬಿರದಲ್ಲಿ ಮಹಿಳೆಯರಿಗೆ ರಕ್ತ ತಪಾಸಣೆ, ಕಣ್ಣಿನ ತಪಾಸಣೆ, ಸ್ತನ ಆರೋಗ್ಯ ತಪಾಸಣೆ, ದಂತ ತಪಾಸಣೆ ಹಾಗೂ ಡಯಾಬಿಟಿಕ್ ನ್ಯೂರೋ ಥೆರಪಿ ಚಿಕಿತ್ಸೆ ಮಾಡಲಾಯಿತು. ಸುಮಾರು 150ಕ್ಕೂ ಹೆಚ್ಚು ಮಹಿಳೆಯರು ವಿವಿಧ ತಪಾಸಣೆಗೆ ಒಳಗಾದರು.

ಈ ಸಂದರ್ಭದಲ್ಲಿ ಜೆ.ಜೆ.ಎಂ.ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ|| ಎಸ್.ಬಿ.ಮುರುಗೇಶ್, ಬಾಪೂಜಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ|| ಕುಮಾರ್, ಡಾ|| ಬಾಲು, ಡಾ|| ಶುಭಾ, ಡಾ|| ಲತಾ, ಡಾ|| ಪ್ರಶಾಂತ್, ಡಾ|| ಡೆನ್ಜಿ ಲಾರೆನ್ಸ್ ಡಾ|| ಸಪ್ನ, ಡಾ|| ಪ್ರಶಾಂತ್, 5ನೇ ವಾರ್ಡ್‍ನ ಪಾಲಿಕೆ ಸದಸ್ಯರಾದ ಶ್ರೀಮತಿ ಸುಧಾ ಇಟ್ಟಿಗುಡಿ ಮಂಜುನಾಥ್, ಪಾಲಿಕೆ ಸದಸ್ಯರುಗಳಾದ ಶ್ರೀಮತಿ ಆಶಾ ಉಮೇಶ್, ಶ್ರೀಮತಿ ಸವಿತಾ ಗಣೇಶ್ ಹುಲ್ಮನಿ, ಶ್ರೀಮತಿ ಮೀನಾಕ್ಷಿ ಜಗದೀಶ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!