ಪರಿಷತ್ತ್ ಚುನಾವಣೆ ಹಿನ್ನೆಲೆ: ರಾಜ್ಯ ಪತ್ರಕರ್ತರ ಸಮ್ಮೇಳನ ಡಿಸೆಂಬರ್ ಗೆ ಮಂದೂಡಿಕೆ – ಶಿವಾನಂದ ತಗಡೂರು

ಬೆಂಗಳೂರು :ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಕಲಬುರಗಿಯಲ್ಲಿ ಇದೇ ನ .27 & 28 ರಂದು ನಡೆಯಬೇಕಾಗಿದ್ದ 36 ನೇ ರಾಜ್ಯ ಪತ್ರಕರ್ತರ ಸಮ್ಮೇಳನಕ್ಕೆ , ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತ ಅಡ್ಡಿಯಾಗಿದೆ .
ಸಮ್ಮೇಳನದಲ್ಲಿ ಸಿಎಂ ಭಾಗವಹಿಸಲು ಕೂಡ ಅನುಮತಿ ಪಡೆಯಲೇಬೇಕು ಎನ್ನುವ ಆಯೋಗದ ನಿರ್ದೇಶನ ಹಿನ್ನಲೆಯಲ್ಲಿ ಅನುಮತಿ ಕೋರಿ ಚುನಾವಣಾ ಆಯೋಗಕ್ಕೆ ಸರ್ಕಾರ ಪತ್ರ ಬರೆದರೂ ಅನುಮತಿ ಬರುವುದು ತಡವಾಗುತ್ತಿದೆ . ಚುನಾವಣಾ ಆಯೋಗದ ಅನುಮತಿ ಇಲ್ಲದೆ ಸಿಎಂ ಮತ್ತು ಸಚಿವರು ಸಮ್ಮೇಳನದಲ್ಲಿ ಭಾಗವಹಿಸಲು ಸಾಧ್ಯವಾಗದ ಕಾರಣ , ಸ್ವಾಗತ ಸಮಿತಿ ಕೋರಿಕೆ ಮೇರೆಗೆ ಸಮ್ಮೇಳನವನ್ನು ಡಿಸೆಂಬರ್ ತಿಂಗಳಿಗೆ ಮುಂದೂಡಲಾಗಿದೆ .
ಮುಖ್ಯಮಂತ್ರಿಗಳ ದಿನಾಂಕ ಖಚಿತಪಡಿಸಿಕೊಂಡು ಸಮ್ಮೇಳನ ದಿನವನ್ನು ಶೀಘ್ರವಾಗಿ ತಿಳಿಸಲಾಗುವುದು ಎಂದು . ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ .