ಏ.16ರಂದು `ಮನೋವೈದ್ಯಶಾಸ್ತ್ರ ಮತ್ತು ಹೋಮಿಯೋಪತಿ’ ಕಾರ್ಯಾಗಾರ

ದಾವಣಗೆರೆ: ಹೋಮಿಯೋಪತಿಕ್ ಮೆಡಿಕಲ್ ಅಸೋಸಿಯೇಷನ್ ವತಿಯಿಂದ `ಮನೋವೈದ್ಯಶಾಸ್ತ್ರ ಮತ್ತು ಹೋಮಿಯೋಪತಿ’ ವಿಷಯ ಕುರಿತು ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಹೋಮಿಯೋಪಥಿ ವೈದ್ಯ ಡಾ.ಎ.ಎನ್. ಸುಂದರೇಶ್, ಇದೇ ಏಪ್ರಿಲ್ 16ರ ಭಾನುವಾರ ಬಾಪೂಜಿ ಬಿ ಸ್ಕೂಲ್ಕ್‌ನ ಎಂಬಿಎ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮವನ್ನು ಡಾ.ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ಖ್ಯಾತ ಮಾನಸಿಕ ತಜ್ಞರುಗಳಾದ ಡಾ.ಸಿ.ಆರ್. ಚಂದ್ರಶೇಖರ್ ಹಾಗೂ ಡಾ.ಗಿರೀಶ್ ನವಡಾ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಲಿದ್ದಾರೆ. ಸಂಜೆ 4 ರಿಂದ 5ರವಗೆೆ ವೈದ್ಯರುಗಳಿಂದ ಮುಕ್ತ ಸಂವಾದ ನಡೆಯಲಿದೆ ಎಂದು ಹೇಳಿದರು.
ಕಾರ್ಯಾಗಾರದಲ್ಲಿ ರಾಜ್ಯದ ವಿವಿದೆಡೆಯಿಂದ ಸುಮಾರು 250ಕ್ಕೂ ಹೆಚ್ಚು ವೈದ್ಯರು ಭಾಗವಹಿಸುವ ನಿರೀಕ್ಷೆ ಇದೆ. ಇದೇ ವೇಳೆ ಡಾ.ಸಿ.ಆರ್. ಚಂದ್ರಶೇಖರ್ ಅವರು ಬರೆದಿರುವ `ಮಾನಸಿಕ ಆರೋಗ್ಯ ಹಾಗೂ ಆರೋಗ್ಯ ವರ್ಧನೆ’ ಪುಸ್ತಕದ ಲೋಕಾರ್ಪಣೆ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವೈದ್ಯರುಗಳಾದ ಕೆ.ಆರ್. ಶರತ್ ರಾಜ್, ಬಿ.ಎಸ್. ಗಿರೀಶ್, ಹೆಚ್.ಎಸ್. ಪಾಂಡುರಂಗ, ಪ್ರಭುದೇವ್ ಉಪಸ್ಥಿತರಿದ್ದರು.