ತರಳಬಾಳು ಕೃಷಿ ಕೇಂದ್ರದಲ್ಲಿ ವಿಶ್ವ ಹಾಲು ದಿನಾಚರಣೆ: ಹಾಲಿನ ಇಳುವರಿ ಹೆಚ್ಚಿಸುವಂತೆ ರೈತರಿಗೆ ಕಿವಿಮಾತು

World milk day kmf garudavoice news davanagere

ದಾವಣಗೆರೆ: ದಾವಣಗೆರೆಯ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ವಿಶ್ವ ಹಾಲು ದಿನಾಚರಣೆಯನ್ನು ಮಂಗಳವಾರದಂದು ವಚ್ರ್ಯುವಲ್ ಕಾರ್ಯಕ್ರಮ ಮೂಲಕ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರದ ಮುಖ್ಯಸ್ಥ ಡಾ. ದೇವರಾಜ ಟಿ.ಎನ್., ವಿಶ್ವದಲ್ಲಿ 2001 ರಿಂದಲೂ ಪ್ರತಿ ವರ್ಷ ಜೂನ್ 1 ರಂದು ‘ವಿಶ್ವ ಹಾಲು ದಿನಾಚರಣೆ’ ಆಚರಿಸಲಾಗುತ್ತಿದ್ದು, ವಿಶ್ವದಲ್ಲಿ 100 ಕೋಟಿಗೂ ಅಧಿಕ ಜನ ಹೈನುಗಾರಿಕೆಯಲ್ಲಿ ಉದ್ಯೋಗ ಸೃಷ್ಟಿಸಿಕೊಂಡಿದ್ದಾರೆ. ಹಾಲಿನ ಇಳುವರಿ ಹೆಚ್ಚು ಮಾಡುವ ಕಡೆ ರೈತರು ಗಮನಹರಿಸಬೇಕೆಂದರು.

ಶುದ್ಧ ಮತ್ತು ಗುಣಮಟ್ಟದ ಹಾಲು ಉತ್ಪಾದನೆ ಬಗ್ಗೆ ಮಾತನಾಡಿದ ಪಶುವಿಜ್ಞಾನಿ ಡಾ. ಜಯದೇವಪ್ಪ ಜಿ.ಕೆ. ರವರು ಹಾಲಿನ ಉತ್ಪಾದನೆಯಲ್ಲಿ ಭಾರತ ಮೊದಲನೆ ಸ್ಥಾನದಲ್ಲಿದ್ದು ಇಳುವರಿಯಲ್ಲಿ ಹಿಂದಿದ್ದೇವೆ, ರಾಸುಗಳ ಸಮತೋಲನ ಆಹಾರ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!