ಚೀನಾ ಅಧ್ಯಕ್ಷರಾಗಿ ಷಿ ಜಿನ್ ಪಿಂಗ್ ಮರು ಆಯ್ಕೆ
ಬೀಜಿಂಗ್: ಷಿ ಜಿನ್ ಪಿಂಗ್ ಅವರು 3ನೇ ಅವಧಿಗೆ ಚೀನಾ ಅಧ್ಯಕ್ಷರಾಗಿ ಶುಕ್ರವಾರ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ(ಸಿಪಿಸಿ) ತನ್ನ ನಾಯಕನಾಗಿ 69 ವರ್ಷದ ಷಿ ಜಿನ್ ಪಿಂಗ್ ಅವರನ್ನು ಮರು ಆಯ್ಕೆ ಮಾಡಿತ್ತು. ಪಕ್ಷದ ಸಂಸ್ಥಾಪಕ ಮಾವೋ ಝೆಡಾಂಗ್ ನಂತರ ಸತತ ಎರಡು ಬಾರಿ ಪೂರ್ಣಾವಧಿ ಅಧಿಕಾರ ಪೂರೈಸಿ ಮತ್ತೆ ಅಧ್ಯಕ್ಷರಾದ ಮೊದಲ ಚೀನೀ ನಾಯಕ ಎಂಬ ಹೆಗ್ಗಳಿಕೆಗೆ ಜಿನ್ ಪಿಂಗ್ ಪಾತ್ರರಾಗಿದ್ದಾರೆ.
ಚೀನಾದ ಶಾಸಕಾಂಗ, ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ (ಎನ್‌ಪಿಸಿ), ಶಿಷ್ಟಾಚಾರದಂತೆ ಷಿ ಜಿನ್ ಪಿಂಗ್ ಅವರನ್ನು ಅಧಿಕೃತವಾಗಿ ಶುಕ್ರವಾರ ಸರ್ವಾನುಮತದಿಂದ ಅಧ್ಯಕ್ಷರನ್ನಾಗಿ ಅನುಮೋದಿಸಿತು.
ಕಳೆದ ಅಕ್ಟೋಬರ್‌ನಲ್ಲಿ ನಡೆದ ಪಕ್ಷದ ಮಹಾಧಿವೇಶನದಲ್ಲಿ ಸಿಪಿಸಿ ಪ್ರಧಾನ ಕಾರ್ಯದರ್ಶಿಯಾಗಿ ಷಿ ಜಿನ್ ಪಿಂ0ಗ್ ಆಯ್ಕೆಯಾಗಿದ್ದಾರೆ. ಪಕ್ಷವು ತನ್ನ ಎಲ್ಲಾ ಉನ್ನತ ನೀತಿ ಸಂಸ್ಥೆಗಳಿಗೆ ಹೊಸ ನಾಯಕತ್ವವನ್ನು ಆಯ್ಕೆ ಮಾಡಿದೆ.