ಕಾಲುವೆಯಲ್ಲಿ ಕಾಲು ಜಾರಿ ಬಿದ್ದು ಯುವಕ ಸಾವು! ಎಂಪಿ. ರೇಣುಕಾಚಾರ್ಯರಿಂದ ಯುವಕನ ಕುಟುಂಬಕ್ಕೆ ಸಹಾಯಧನ

ದಾವಣಗೆರೆ: ಮನೆ ಹಿಂಭಾಗ ಇರುವ ಕಾಲುವೆಗೆ ಯುವಕನೊಬ್ಬನ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ನ್ಯಾಮತಿ ತಾಲೂಕು ವ್ಯಾಪ್ತಿಯಲ್ಲಿ ನಡೆದಿದೆ.
ನ್ಯಾಮತಿ ತಾಲೂಕಿನ ದೊಡ್ಡೇರಿ ಗ್ರಾಮದ ಆದರ್ಶ(22) ಎಂಬ ಯುವಕ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಸಾವನ್ನಪ್ಪಿದ್ದಾನೆ. ವಿಷಯ ತಿಳಿದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ದೊಡ್ಡೇರಿ ಗ್ರಾಮಕ್ಕೆ ಭೇಟಿ ಯುವಕನ ಪೋಷಕರಿಗೆ ಸಾಂತ್ವಾನ ಹೇಳಿ ಯುವಕನ ಕುಟುಂಬಕ್ಕೆ ವೈಯಕ್ತಿಕವಾಗಿ 25 ಸಾವಿರ ಸಹಾಯಧನ ನೀಡಿದರು.