ಸಮಾಜದ ಶ್ರೇಷ್ಠತೆಗೆ ಶ್ರಮಿಸಿದ ಯುಗಪುರುಷ ಸವಿತಾ ಮಹರ್ಷಿಗಳು-ಡಾ.ಲೋಕೇಶ್

ದಾವಣಗೆರೆ : ಸಮಾಜದ ಶ್ರೇಷ್ಠತೆಗೆ ಶ್ರಮಿಸಿದ ಯುಗ ಪುರುಷ ಎಂದೆ ಖ್ಯಾತರಾದ ಶ್ರೀ ಸವಿತಾ ಮಹರ್ಷಿಗಳ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ತಿಳಿಸಿದರು.
ಮಂಗಳವಾರ ಜಿಲ್ಲಾಡಳಿತ ಭವನ, ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಸವಿತ ಸಮಾಜ ಇವರ ಸಂಯುಕ್ತಶ್ರಯದಲ್ಲಿ ಶ್ರೀ ಸವಿತಾ ಮಹರ್ಷಿ ಸಮುದಾಯ ಭವನದಲ್ಲಿ ನಡೆದ ಶ್ರೀ ಸವಿತಾ ಮಹರ್ಷಿ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಕಲ ಜೀವರಾಶಿಗಳಿಗೆ ಸೂರ್ಯನು ಹೇಗೆ ಅವಶ್ಯಕವಾಗಿದ್ದಾನೂ ಹಾಗೆ ಆಧುನಿಕ ಕಾಲದ ಸಕಲರಿಗೂ ಸವಿತ ಸಮಾಜದ ಸೇವೆ ಅಗತ್ಯವಾಗಿದೆ. ಧಾರ್ಮಿಕವಾಗಿ ಶಿವನ ಎಡಗಣ್ಣಿನಿಂದ ಹುಟ್ಟಿದ ಸವಿತ ಮಹರ್ಷಿಯು ದೇವಾನು ದೇವತೆಗಳ ಆಯುಷ್ಕಾರ್ಯಗಳನ್ನು ಮಾಡುತ್ತಿದ್ದ ಈ ನಿಟ್ಟಿನಲ್ಲಿ ಸಮಾಜದವರು ಕೂಡ  ವೃತ್ತಿಯನ್ನಾಗಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ತಳಸಮುದಾಯದ ಸವಿತಾ ಸಮಾಜವು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸದೃಡರಾಗಿ, ಸಂಘಟಿತರಾಗುವ ಮೂಲಕ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರು ಬಾಲರಾಜು, ವಿಶೇಷ ಉಪನ್ಯಾಸ ವೆಂಕಟಚಲಪತಿ, ರಂಗಸ್ವಾಮಿ, ಹನುಮಂತಪ್ಪ, ಪರುಶುರಾಮ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!