ವೈವಾಹಿಕ ಜೀವನಕ್ಕೆ ಕಾಲಿಟ್ಟ ನೋಬಲ್ ಶಾಂತಿ ಪುರಸ್ಕೃತ ‘ ಮಲಾಲ ‘ ಟ್ವಿಟ್ಟರ್ ನಲ್ಲಿ ನಿಕಾ ಫೊಟೊಸ್ ಶೇರ್.!

IMG-20211110-WA0063

ಇಂಗ್ಲೆಂಡ್: ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ, ಪಾಕಿಸ್ತಾನದ ಶಿಕ್ಷಣ ಹೋರಾಟಗಾರ್ತಿ ಮಲಾಲಾ ಯೂಸುಫ್ ಝಾಯಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಬರೆದುಕೊಂಡಿದ್ದಾರೆ.

“ಇಂದು ನನ್ನ ಜೀವನದಲ್ಲಿ ಅಮೂಲ್ಯವಾದ ದಿನ. ಅಸ್ಸರ್ ಮತ್ತು ನಾನು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೇವೆ. ನಾವು ನಮ್ಮ ಕುಟುಂಬಗಳೊಂದಿಗೆ ಬರ್ಮಿಂಗ್‌ಹ್ಯಾಮ್‌ನಲ್ಲಿರುವ ಮನೆಯಲ್ಲಿ ಸಣ್ಣ ನಿಕ್ಕಾ ಸಮಾರಂಭವನ್ನು ಆಚರಿಸಿದ್ದೇವೆ. ದಯವಿಟ್ಟು ನಿಮ್ಮ ಪ್ರಾರ್ಥನೆಗಳನ್ನು ನಮಗೆ ಕಳುಹಿಸಿ, ಮುಂದಿನ ಪ್ರಯಾಣದಲ್ಲಿ ನಾವು ಒಟ್ಟಿಗೆ ನಡೆಯಲು ಬಯಸಿದ್ದೇವೆ’ ಎಂದು ಟ್ವಿಟ್ ಮಾಡಿ ಮದುವೆಯ ಫೊಟೊಸ್ ಗಳನ್ನ ಶೇರ್ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!