Zee Kannada: ಜೀ಼ ಕನ್ನಡ ರೈಟರ್ಸ್ ಆಡಿಷನ್ ದಾವಣಗೆರೆಯಲ್ಲಿ ಇದೇ ಶನಿವಾರದಂದು

IMG-20250108-WA0004

ದಾವಣಗೆರೆ: (Zee Kannada) ಬರಹಗಾರರಾಗುವ ನಿಮ್ಮ ಕನಸನ್ನು ನನಸಾಗಿಸಲು ಇಲ್ಲಿದೆ ನೋಡಿ ಉತ್ತಮ ವೇದಿಕೆ! ಮನರಂಜನೆಗೆ ಮತ್ತೊಂದು ಹೆಸರೇ ಜೀ಼ ಕನ್ನಡ. ತನ್ನ ವಿಭಿನ್ನ ಕಥಾ ಹಂದರದಿಂದ ನಿಮ್ಮ ಮನಕದ್ದ ಜೀ಼ ಕನ್ನಡ ಈಗ ನಿಮಗಾಗಿ ಮತ್ತೊಂದು ಸರ್ಪ್ರೈಸ್ ತಂದಿದೆ. ಹೌದು, ಆ ವಿಭಿನ್ನ ಕಥೆ ಬರೆಯುವ ಬರಹಗಾರರು ನೀವೇ

ಯಾಕಾಗಬಾರದು? ಚೆನ್ನಾಗಿ ಕಥೆ ಬರೆಯುತ್ತೀರಾ? ಒಳ್ಳೆ ಸಂಭಾಷಣೆಯ ಕಲೆ ನಿಮ್ಮಲ್ಲಿ ಇದ್ಯಾ? ನೀವು ಬರಹಗಾರರಾಗಬೇಕೇ? ನಿಮ್ಮ ಪ್ರತಿಭೆಗೆ ತಕ್ಕ ಪ್ರತಿಫಲ ಸಿಗುತ್ತಿಲ್ಲವೇ? ಡೋಂಟ್ ವರಿ. ಪ್ರತಿಭಾವಂತ ಬರಹಗಾರರಿಗೆ ಎಲ್ಲಿಯೂ ಸಿಗದ ಅವಕಾಶವನ್ನು ಹೊತ್ತು ಜೀ ಕನ್ನಡ ನಿಮ್ಮ ಮುಂದೆ ಬರ್ತಿದೆ. ನಿಮ್ಮೊಳಗಿರುವ ಕಥೆಗಾರ ಮತ್ತು ಸಂಭಾಷಣೆಕಾರರಿಗೆ ಇದು ಅತ್ಯುತ್ತಮ ವೇದಿಕೆಯಾಗಿದ್ದು, ನಿಮ್ಮ ಕಲೆಗೆ ಈ ವೇದಿಕೆಯಲ್ಲಿ ಬೆಲೆ ಸಿಗಲಿದೆ. ಜೀ ಕನ್ನಡ ‘ ರೈಟರ್ಸ್ ಆಡಿಷನ್ ‘ ನಲ್ಲಿ ನಿಮ್ಮ ಅತ್ಯುತ್ತಮ ಬರವಣಿಗೆ ಸಾಮರ್ಥ್ಯವನ್ನು ಪ್ರದರ್ಶಿಸಲು ಒಂದು ಅವಕಾಶವನ್ನು ನೀಡುವುದರ ಜೊತೆಗೆ ಉದ್ಯೋಗಾವಕಾಶವನ್ನು ಕಲ್ಪಿಸಿಕೊಡುತ್ತಿದೆ.

ಇದೇ ಜನವರಿ 11 ರಂದು ಶನಿವಾರ ಬೆಳಗ್ಗೆ 9 ಗಂಟೆಗೆ ಬಿ.ಎಸ್ ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜು, ಎಸ್. ಎಸ್, ಲೇಔಟ್ ಎ ಬ್ಲಾಕ್.ಎಸ್. ಎಸ್ ಲೇಔಟ್, ದಾವಣಗೆರೆ.ಇಲ್ಲಿ ನಡೆಯಲಿದೆ.ಬನ್ನಿ ಜೀ಼ ಕನ್ನಡ ನಡೆಸಿಕೊಡುತ್ತಿರುವ ರೈಟರ್ಸ್ ಆಡಿಷನ್ ನಲ್ಲಿ ಪಾಲ್ಗೊಂಡು ಬರಹಗಾರರರಾಗುವ ನಿಮ್ಮ ಕನಸನ್ನು ನನಸಾಗಿಸಿ!

Leave a Reply

Your email address will not be published. Required fields are marked *

error: Content is protected !!