ಜಿಲ್ಲಾಧಿಕಾರಿಗಳ ತಂಡದಿಂದ ಅಕ್ರಮ ಪಂಪ್ಸೆಟ್ ತೆರವು ಕಾರ್ಯಚರಣೆ

ದಾವಣಗೆರೆ ಜು. 18; ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ನೇತೃತ್ವದಲ್ಲಿ ತುಂಗಭದ್ರಾ ನದಿ ನಾಲೆಗಳ ಪ್ರದೇಶಕ್ಕೆ ಭೇಟಿ ನೀಡಿ ಅಕ್ರಮವಾಗಿ ಅಳವಡಿಸಿಕೊಳ್ಳಲಾಗಿದ್ದ ಪಂಪ್ಸೆಟ್ಗಳನ್ನು ತೆರವುಗೊಳಿಸಲಾಯಿತು.
ಕುರ್ಕಿ, ರಂಗವ್ವನಹಳ್ಳಿ, ಬಾಡ, ತಣಿಗೆರೆ, ಮೆದಿಕೆರೆ, ಮಂಗೇನಹಳ್ಳಿ, ಎಕ್ಕೆಗುಂದಿ, ಸಿದ್ದನಮಠ, ತೋಪೆನಹಳ್ಳಿ, ಸಂತೆಬೆನ್ನೂರು, ಸೋಮಲಾಪುರ, ಕೆರೆಬಿಳಚಿ, ಬಸವಾಪಟ್ಟಣ, ಕಣಿವೆ ಬಿಳಚಿ, ಹರೋಸಾಗರ, ಸಾಗರಪೇಟೆ, ಅರಳಿಪುರ, ಕುಂದೂರು, ಕುಂಬಳೂರು, ಎಕ್ಕನಹಳ್ಳಿ ಈ ಗ್ರಾಮಗಳಲ್ಲಿ ಅಕ್ರಮ ಪಂಪ್ಸೆಟ್ ತೆರವು ಕಾರ್ಯಚರಣೆಯನ್ನು ಕೈಗೊಳ್ಳಲಾಯಿತು. ಹರಿಹರ, ದಾವಣಗೆರೆ, ಹೊನ್ನಾಳಿ, ಚನ್ನಗಿರಿ, ತಹಶೀಲ್ದಾರಗಳೊಂದಿಗೆ ನೀರಾವರಿ ಇಲಾಖೆಯ ಎಂಜಿನಿಯರುಗಳಾದ ಪಾಟೀಲ್, ಮಲ್ಲಪ್ಪ, ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.