ಆತ್ಮೀಯ ಶಾಲಾ ವಾಹನ ಚಾಲಕರೇ., ಮಕ್ಕಳು 𝙳𝙾𝙾𝚁 ಬಳಿ ನಿಲ್ಲದಂತೆ ನಿಗಾ ವಹಿಸಿ
ಬೆಂಗಳೂರು: ಕಿಟಕಿಯ ಹೊರಗೆ ಕೈ & ತಲೆ ಹೊರ ಚಾಚದಂತೆ ಆಗೊಮ್ಮೆ – ಈಗೊಮ್ಮೆ ಸೂಚನೆ ನೀಡಿ.
ಜಾಗಕ್ಕಾಗಿ ಜಗಳ ಮಾಡದೆ ಒಬ್ಬರಿಗೊಬ್ಬರು ಹೊಂದಾಣಿಕೆ ಮನೋಭಾವ ಬೆಳೆಸಿಕೊಳ್ಳಲು ಆಯಾ ಸಮಯದಲ್ಲೇ ತಿಳಿ ಹೇಳಿ. ಶಾಲೆಗೆ ಹೋಗಿ ವಾಪಸ್ ಬರುವ ತನಕವೂ ಮಕ್ಕಳ ಮನಸ್ಸು ಅರಳಿರಲಿ. ಖಾಲಿ ಬಸ್ ಇದ್ದಾಗ ಅಥವಾ ನೀವು ಒಬ್ಬರೇ ವಾಹನ ಚಾಲನೆ ಮಾಡುವಾಗ 𝙾𝙺.
ಆದರೆ ಮಕ್ಕಳು ಇರುವಾಗ ಮನರಂಜನೆಗಾಗಿ 𝙰𝚄𝙳𝙸𝙾 ಅಥವಾ 𝚅𝙸𝙳𝙴𝙾 𝙿𝙻𝙰𝚈 ಮಾಡಬೇಡಿ. ಏಕೆಂದರೆ ತಿಳಿವಳಿಕೆ ಇಲ್ಲದ ಕೆಲ ಚಿಕ್ಕ ಮಕ್ಕಳು ಕುಣಿದಾಡಲು ಶುರು ಮಾಡಿ ಬಿಡುತ್ತಾರೆ. ಕೆಲ ಮಕ್ಕಳು ತಮ್ಮಿಷ್ಟದ ಹಾಡು 𝙿𝙻𝙰𝚈 ಮಾಡುವಂತೆ ಒಬ್ಬೊಬ್ಬರು ಒಂದೊಂದು ವಿಭಿನ್ನ ಹಾಡಿಗಾಗಿ ದುಂಬಾಲು ಬೀಳಬಹುದು. ಇದರಿಂದ ವಾಹನ ಚಾಲಕರ ಗಮನ ಅತ್ತಿತ್ತ ಆಗುವ ಸಂಭವ ಹೆಚ್ಚು .
ಮರೆಯದಿರಿ ಪೋಷಕರಿಗೆ ನಿಮ್ಮ ಮೇಲೆ ಅತೀವ ವಿಶ್ವಾಸ
– ಗಂಗಾಧರ ಬಿ ಎಲ್ ನಿಟ್ಟೂರ್